×
Ad

ಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿ: ಕನಿಷ್ಠ ಐವರು ಯೋಧರಿಗೆ ಗಾಯ

Update: 2017-11-02 20:16 IST

ಜಮ್ಮುಕಾಶ್ಮೀರ, ನ. 2: ಜಮ್ಮು ಹಾಗೂ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಯ ವಾಹನದ ಮೇಲೆ ಗುರುವಾರ ಉಗ್ರರು ದಾಳಿ ನಡೆಸಿದ ಪರಿಣಾಮ ಕನಿಷ್ಠ 5 ಮಂದಿ ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಅನಂತ್‌ನಾಗ್ ಜಿಲ್ಲೆಯ ಲಝಿಬಾಲ್‌ನಲ್ಲಿ 96 ಬೆಟಾಲಿಯನ್‌ನ ವಾಹನದ ಮೇಲೆ ಉಗ್ರರು ಬೆಳಗ್ಗೆ 8.30ಕ್ಕೆ ದಾಳಿ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಮೂವರು ಯೋಧರಿಗೆ ಗುಂಡಿನ ಗಾಯಗಳಾಗಿವೆ. ಇನ್ನಿಬ್ಬರಿಗೆ ವಾಹನದ ಗಾಜು ತಾಗಿ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News