ಸಾಂಬಾದಲ್ಲಿ ಪಾಕಿಸ್ತಾನಿ ರೇಂಜರ್ ದಾಳಿ: ಗಡಿ ಭದ್ರತಾ ಪಡೆ ಯೋಧ ಹುತಾತ್ಮ

Update: 2017-11-02 14:49 GMT

ಜಮ್ಮು, ನ. 2: ಜಮ್ಮು ಹಾಗೂ ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿಗುಂಟ ಗಸ್ತು ನಡೆಸುತ್ತಿದ್ದ ಯೋಧರ ಮೇಲೆ ಪಾಕಿಸ್ತಾನಿ ರೇಂಜರ್‌ಗಳು ದಾಳಿ ನಡೆಸಿದ ಪರಿಣಾಮ ಓರ್ವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ ಹುತಾತ್ಮರಾಗಿದ್ದಾರೆ.

 ಸಾಂಬಾ ವಲಯದಲ್ಲಿ ಗಸ್ತು ನಡೆಸುತ್ತಿದ್ದ ಗಡಿ ಭದ್ರತಾ ಪಡೆಯ ಯೋಧರ ಮೇಲೆ ಪಾಕಿಸ್ತಾನದ ರೇಂಜರ್‌ಗಳು ಗುರುವಾರ ಬೆಳಗ್ಗೆ 9.30ಕ್ಕೆ ದಾಳಿ ನಡೆಸಿದರು. ಗಡಿ ಭದ್ರತಾ ಪಡೆ ಯೋಧರು ಪ್ರತಿದಾಳಿ ನಡೆಸಿದರು ಎಂದು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ದಾಳಿಯಲ್ಲಿ ಗಂಭೀರ ಗಾಯಗೊಂಡ ಕಾನ್ಸ್‌ಟೆಬಲ್ ತಪನ್ ಮಂಡಲ್ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News