ಗಂಭೀರ್ ಕುಟುಂಬ ಭೇಟಿಯಾದ ಸುರೇಶ್ ರೈನಾ ಫುಲ್ ಖುಷ್

Update: 2017-11-03 05:56 GMT

ಹೊಸದಿಲ್ಲಿ, ನ.3: ಭಾರತದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಇನ್ನೋರ್ವ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಂಭ್ರಮಪಟ್ಟರು. ಗಂಭೀರ್ ಕುಟುಂಬ ಸದಸ್ಯರೊಂದಿಗೆ ಇರುವ ಚಿತ್ರವನ್ನು ರೈನಾ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

 ‘‘ಗೌತಮ್ ಗಂಭೀರ್‌ಗೆ ಅಭಿನಂದನೆಗಳು. ಪುಟಾಣಿಗಳೊಂದಿಗೆ ಬೆರೆತು ಸಂತೋಷಪಟ್ಟೆ. ಗಂಭೀರ್ ಕುಟುಂಬಕ್ಕೆ ಶುಭಹಾರೈಸುವೆ’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ಗಂಭೀರ್ ಹಾಗೂ ನಟಾಶಾ ದಂಪತಿಗೆ 2017ರ ಜುಲೈನಲ್ಲಿ ಹೆಣ್ಣುಮಗು ಜನಿಸಿತ್ತು. ಗಂಭೀರ್‌ಗೆ ಇದು ಎರಡನೆ ಹೆಣ್ಣು ಮಗುವಾಗಿತ್ತು. ರೈನಾ ಪ್ರಸ್ತುತ ದಿಲ್ಲಿ ವಿರುದ್ಧ ರಣಜಿ ಪಂದ್ಯದಲ್ಲಿ ಉತ್ತರಪ್ರದೇಶ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

ಗಂಭೀರ್ ಹಾಗೂ ರೈನಾ 2011ರ ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಪ್ರಸ್ತುತ ಉಭಯ ಆಟಗಾರರು ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ.

ಗಂಭೀರ್ ಕಳೆದ ವರ್ಷ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿದ್ದರು. 2013ರ ಬಳಿಕ ಏಕದಿನ ಪಂದ್ಯವನ್ನು ಆಡಿಲ್ಲ. ರೈನಾ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಟ್ವೆಂಟಿ-20 ಸರಣಿಯನ್ನು ಆಡಿದ್ದರು. 2015ರಲ್ಲಿ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು.

 ಪ್ರಸ್ತುತ ರೈನಾ ಹಾಗೂ ಗಂಭೀರ್ ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಗಂಭೀರ್ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದು, ಈ ವರ್ಷ ತಂಡದ ನಾಯಕತ್ವವನ್ನು ಇಶಾಂತ್ ಶರ್ಮಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News