×
Ad

ಕಮಲ್ ಹಾಸನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

Update: 2017-11-03 19:10 IST

ವಾರಣಾಸಿ, ನ.3: ಹಿಂದೂ ಭಯೋತ್ಪಾದನೆ ಇಲ್ಲ ಎನ್ನಲಾಗದು ಎಂದು ಹೇಳಿಕೆ ನೀಡಿದ್ದ ಒಂದು ದಿನದ ಬಳಿಕ ನಟ, ನಿರ್ದೇಶಕ ಕಮಲ್ ಹಾಸನ್ ವಿರುದ್ಧ ವಾರಣಾಸಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಐಪಿಸಿ ಸೆಕ್ಷನ್ 500, 511, 298, 295 (ಎ) ಹಾಗು 505 (ಸಿ) ಗಳಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಮಿಳು ಮ್ಯಾಗಝಿನ್ ವಿಕಟನ್ ಗೆ ಬರೆದಿದ್ದ ಲೇಖನವೊಂದರಲ್ಲಿ ಕಮಲ್, ಈ ಹಿಂದೆ ಹಿಂದೂ ಭಯೋತ್ಪಾದಕರು ಹಿಂಸೆಯಲ್ಲಿ ತೊಡಗುತ್ತಿರಲಿಲ್ಲ. ಆದರೆ ಇಂದು ಹಾಗಿಲ್ಲ. ಹಿಂದೂ ಭಯೋತ್ಪಾದನೆ ಇಲ್ಲ ಎನ್ನಲು ಸಾಧ್ಯವಿಲ್ಲ ಎಂದಿದ್ದರು/

ಕಮಲ್ ಹಾಸನ್ ರ ಈ ಹೇಳಿಕೆಯ ವಿರುದ್ಧ ಸಂಘಪರಿವಾರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಅವರು ಕಮಲ್ ಹಾಸನ್ ರನ್ನು ಲಷ್ಕರ್ ಎ ತೊಯ್ಬಾದ ಹಾಫಿಝ್ ಸಯೀದ್ ಗೆ ಹೋಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News