×
Ad

ಪಾಕಿಸ್ತಾನ: ಭೂಕುಸಿತದಲ್ಲಿ 8 ಸಾವು

Update: 2017-11-03 20:45 IST

ಪೇಶಾವರ, ನ. 3: ವಾಯುವ್ಯ ಪಾಕಿಸ್ತಾನದ ಬುಡಕಟ್ಟು ವಲಯವೊಂದರಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಲ್ಲಿ ಏಳು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ.

ಬಜಾರ್ ಏಜನ್ಸಿಯ ಗುಡ್ಡಗಾಡು ಸಿಕಂದರೊ ಕಂಡವೊ ಗ್ರಾಮದಲ್ಲಿ ಜನರು ಮನೆ ಕಟ್ಟಲು ಮಣ್ಣು ಅಗೆಯುತ್ತಿದ್ದಾಗ ಭೂಕುಸಿತ ಸಂಭವಿಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಖಾಸಾದರ್ ಪಡೆಯು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪುನರ್ವಸತಿ ಕಾರ್ಯಾಚರಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News