2022ರ ವೇಳೆಗೆ ಬಡತನ ಮತ್ತು ಭ್ರಷ್ಟಾಚಾರ ಮುಕ್ತ ಭಾರತ: ನೀತಿ ಆಯೋಗ

Update: 2017-11-04 12:15 GMT

ಹೊಸದಿಲ್ಲಿ,ನ.4: 2022ರ ವೇಳೆಗೆ ಬಡತನ, ಕೊಳಕು, ಭ್ರಷ್ಟಾಚಾರ, ಭಯೋತ್ಪಾದನೆ, ಜಾತೀಯತೆ ಮತ್ತು ಕೋಮುವಾದಗಳಿಂದ ಮುಕ್ತ ನವ ಭಾರತದ ಚಿಂತನೆಯನ್ನು ನೀತಿ ಆಯೋಗವು ಹೊಂದಿದೆ.

 ಕಳೆದ ತಿಂಗಳು ರಾಜ್ಯಪಾಲರ ಸಮಾವೇಶದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು ಮಂಡಿಸಿದ್ದ ‘2022ರಲ್ಲಿ ನವಭಾರತ’’ ಪ್ರಸ್ತಾವದಂತೆ ಈಗಿನಿಂದ 2047ರವರೆಗೆ ಶೇ.8ರ ದರದಲ್ಲಿ ಭಾರತದ ಪ್ರಗತಿಯು ಮುಂದುವರಿದರೆ ಅದು ವಿಶ್ವದ ಮೂರು ಅತ್ಯುನ್ನತ ಆರ್ಥಿಕತೆಗಳ ಗುಂಪಿಗೆ ಸೇರಲಿದೆ.

2022ರ ವೇಳೆಗೆ ಭಾರತವನ್ನು ಕುಪೋಷಣೆ ಮುಕ್ತವನ್ನಾಗಿಸಲೂ ಆಯೋಗವು ಚಿಂತನೆಯನ್ನು ಹೊಂದಿದೆ.

2019ರ ವೇಳೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 500ಕ್ಕೂ ಅಧಿಕ ಜನಸಂಖ್ಯೆಯ(ವಿಶೇಷ ಪ್ರದೇಶಗಳಲಿ 250) ಎಲ್ಲ ಗ್ರಾಮಗಳನ್ನು ಸರ್ವಋತು ರಸ್ತೆಗಳ ಮೂಲಕ ಸಂಪರ್ಕಿಸಲು ಸರಕಾರಕ್ಕೆ ಸಾಧ್ಯವಾಗಲಿದೆ. 2022ರ ವೇಳೆಗೆ ಭಾರತವು 20 ವಿಶ್ವದರ್ಜೆಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಲಿದೆ. ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಎಲ್ಲ ಗ್ರಾಮಗಳು 2022ರ ವೇಳೆಗೆ ಆದರ್ಶ ಗ್ರಾಮ ಸ್ಥಾನಮಾನವನ್ನು ಪಡೆಯಬೇಕು ಎಂದು ಹೇಳಿರುವ ಆಯೋಗದ ಪ್ರಸ್ತಾವವು, 2022ರ ವೇಳೆಗೆ ಬಡತನ ಮುಕ್ತ ಭಾರತವನ್ನು ಹೊಂದಲು ನಾವು ನಿರ್ಣಯವನ್ನು ಕೈಗೊಳ್ಳಬೇಕಿದೆ ಎಂದೂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News