×
Ad

ಹಿಮಾಚಲ ಪ್ರದೇಶ: ಮತದಾರರಿಗೆ 'ಕೋತಿಗಳ' ಬಗ್ಗೆ ಭರವಸೆ ನೀಡಿದ ಕಾಂಗ್ರೆಸ್, ಬಿಜೆಪಿ!

Update: 2017-11-04 18:11 IST

ಹಮೀರಪುರ್,ನ.4 :  ಹಿಮಾಚಲ ಪ್ರದೇಶದ ಸುಮಾರು 2000 ಗ್ರಾಮಗಳಲ್ಲಿ ಕೋತಿಗಳ ಉಪಟಳ ಹೇಳತೀರದಾಗಿದೆ. ಈ ಕೋತಿಗಳು ರೈತರ ಗದ್ದೆಗಳನ್ನು ಪ್ರವೇಶಿಸಿ ಬೆಳೆಗಳನ್ನು ನಾಶಗೈಯ್ಯುವುದು ಸಾಮಾನ್ಯವಾಗಿ ಬಿಟ್ಟಿದೆ.  ಇದೀಗ ನವೆಂಬರ್ 9ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮನ್ನು ಆರಿಸಿದರೆ ಈ ಕೋತಿಗಳ ಉಪಟಳಕ್ಕೆ ಅಂತ್ಯ ಹಾಡುವುದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಹೇಳಿಕೊಂಡಿವೆ.

ಕೋತಿಗಳ ಸಂತಾನಹರಣ ಶಸ್ತ್ರಕ್ರಿಯೆ ಕಾರ್ಯಾಚರಣೆಯನ್ನು ರಾಜ್ಯದ ಕಾಂಗ್ರೆಸ್ ಸರಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸದಿರುವುದರಿಂದಲೇ ಅವುಗಳ ಉಪಟಳ ಅತಿಯಾಗಿದೆ ಎಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಲ್ ಹೇಳಿದ್ದಾರೆ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸತ್ಪಾಲ್ ಸತ್ತಿ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸರಕಾರ ಈ ಕೋತಿಗಳ ಸಮಸ್ಯೆಗೆ ಪರಿಹಾರ ಹುಡುಕಲು ವಿಫಲವಾಗಿದೆ ಎಂದು ಆರೋಪಿಸುತ್ತಾರೆ.
ಶಿಮ್ಲಾ ಮುನಿಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿಯೇ ಸುಮಾರು 2,400 ಕೋತಿಗಳಿವೆ ಎಂದು 2015ರ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News