×
Ad

ಅಮೆರಿಕದಲ್ಲಿ ಸಿಖ್ ಬಾಲಕನಿಗೆ ಥಳಿತ: ವರದಿ ಕೋರಿದ ಸುಷ್ಮಾ ಸ್ವರಾಜ್

Update: 2017-11-04 20:23 IST

ಹೊಸದಿಲ್ಲಿ, ನ. 4: ವಾಷಿಂಗ್ಟನ್ ಸ್ಟೇಟ್ ನಗರದಲ್ಲಿ ಸಿಖ್ ಬಾಲಕನ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಯಿಂದ ಶುಕ್ರವಾರ ವರದಿ ಕೋರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

 “ಅಮೆರಿಕದಲ್ಲಿ ಸಿಖ್ ಬಾಲಕನಿಗೆ ಥಳಿಸಿದ ಸುದ್ದಿಯನ್ನು ನಾನು ನೋಡಿದ್ದೇನೆ. ಘಟನೆ ಬಗ್ಗೆ ವರದಿ ಕಳುಹಿಸುವಂತೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತಿಳಿಸಿದ್ದೇನೆ” ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಕೆಂಟ್ ನಗರದಲ್ಲಿ 14 ವರ್ಷದ ಬಾಲಕನಿಗೆ ಆತನ ಸಹಪಾಠಿಗಳು ಥಳಿಸಿದ್ದಾರೆ. ಭಾರತೀಯ ಎನ್ನುವ ಕಾರಣಕ್ಕೆ ನನ್ನ ಪುತ್ರನಿಗೆ ಥಳಿಸಲಾಗಿದೆ ಎಂದು ತಂದೆ ಹೇಳಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.

ಕೆಂಟ್ರಿಡ್ಜ್ ಪ್ರೌಢಶಾಲೆಯಲ್ಲಿ ಅಕ್ಟೋಬರ್ 26ರಂದು ಈ ಘಟನೆ ನಡೆದಿದೆ. ಇಬ್ಬರೂ ಬಾಲಕರು ವಿದ್ಯಾರ್ಥಿಗಳು ಎಂದು ಟಿ.ವಿ. ವಾಹಿನಿಯೊಂದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News