ಫೆಲೆಸ್ತೀನ್‌ಗೆ ‘ಸಂಪೂರ್ಣ ಸ್ವತಂತ್ರ ದೇಶ’ದ ಮಾನ್ಯತೆ ನೀಡಿ: ಬ್ರಿಟನ್‌ಗೆ ಒಐಸಿ ಒತ್ತಾಯ

Update: 2017-11-04 15:47 GMT

ರಿಯಾದ್, ನ. 4: ಫೆಲೆಸ್ತೀನನ್ನು ಸ್ವತಂತ್ರ ದೇಶವಾಗಿ ಸಂಪೂರ್ಣವಾಗಿ ಮಾನ್ಯ ಮಾಡುವಂತೆ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯು ಬ್ರಿಟನ್ ಮತ್ತು ಇತರ ದೇಶಗಳಿಗೆ ಕರೆ ನೀಡಿದೆ.

ಅದೇ ವೇಳೆ, ‘ಬ್ಯಾಲ್‌ಫೌರ್ ಘೋಷಣೆ’ಯ ಶತಮಾನೋತ್ಸವವನ್ನು ಆಚರಿಸಲು ಸಮಾರಂಭವೊಂದನ್ನು ಆಯೋಜಿಸುವ ಬ್ರಿಟಿಶ್ ಸರಕಾರದ ನಿರ್ಧಾರದ ಬಗ್ಗೆ ಅದು ಅತೃಪ್ತಿ ವ್ಯಕ್ತಪಡಿಸಿದೆ. ಫೆಲೆಸ್ತೀನ್ ನೆಲದಲ್ಲಿ ಇಸ್ರೇಲ್ ದೇಶದ ಸ್ಥಾಪನೆಗೆ ‘ಬ್ಯಾಲ್‌ಫೌರ್ ಘೋಷಣೆ’ಯು ಅಡಿಪಾಯ ಹಾಕಿರುವುದನ್ನು ಸ್ಮರಿಸಬಹುದಾಗಿದೆ.

 ‘ಬ್ಯಾಲ್‌ಫೌರ್ ಘೋಷಣೆ’ಯು ‘ಹೀನ ಕೃತ್ಯ’ವಾಗಿದೆ ಎಂದು ಬಣ್ಣಿಸಿದ ಒಐಸಿ, ಅದರ ವಾರ್ಷಿಕ ದಿನಾಚರಣೆಯನ್ನು ಖಂಡಿಸಿದೆ.

ಆ ಘೋಷಣೆಯು ಫೆಲೆಸ್ತೀನೀಯರನ್ನು ಅವರ ತಾಯ್ನೆಲದಿಂದ ವಂಚಿತರಾಗಿಸಿದೆ ಹಾಗೂ ಅದನ್ನು ಸಂಭ್ರಮಿಸುವುದು ಆಕ್ರಮಿತ ಭೂಭಾಗಗಳಲ್ಲಿ ಈಗಾಗಲೇ ನೆಲೆಸಿರುವ ಉದ್ವಿಗ್ನತೆಯನ್ನು ಹೆಚ್ಚಿಸಬಹುದಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News