ರಿಲಯನ್ಸ್: ಡಿಸೆಂಬರ್ ನಂತರ ವಾಯ್ಸ್ ಕಾಲ್ ಇಲ್ಲ

Update: 2017-11-04 17:38 GMT

ಹೊಸದಿಲ್ಲಿ, ನ.4: ರಿಲಯನ್ಸ್ ಕಮ್ಯುನಿಕೇಶನ್ ಮೊಬೈಲ್  ಉಪಯೋಗಿಸುವವರಿಗೆ ಡಿಸೆಂಬರ್ ಒಂದರ ನಂತರ ವಾಯ್ಸ್  ಕಾಲ್‍ಗಳು ಲಭಿಸುವುದಿಲ್ಲ ಎಂದು  ಕಂಪೆನಿ  ತಿಳಿಸಿದೆ.

ಡಿಸೆಂಬರ್ ಒಂದಕ್ಕಿಂತ ಮೊದಲು ಇತರ ನೆಟ್‍ವರ್ಕ್‍ಗಳಿಗೆ ಸ್ಥಾನಾಂತರಗೊಳ್ಳಲು ರಿಲಯನ್ಸ್ ಸೂಚಿಸಿತ್ತು. ಟೆಲಿಕಾಂ ರೆಗುಲೇಟಿಂಗ್ ಅಥಾರಿಟಿಗೆ ರಿಲಯನ್ಸ್  ಈ ವಿಷಯ ವನ್ನು ತಿಳಿಸಿತ್ತು. ಈಗ 8 ಟೆಲಿಕಾಂ ವಲಯಗಳಲ್ಲಿ ರಿಲಯನ್ಸ್ 2ಜಿ, 4ಜಿ ಸೇವೆ ನೀಡುತ್ತಿದೆ. ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ,  ತಮಿಳ್ನಾಡು,  ಕರ್ನಾಟಕ, ಕೇರಳಗಳಲ್ಲಿ ಕಂಪೆನಿಗೆ ಟೆಲಿಕಾಂ ಲೈಸನ್ಸ್ ಇದೆ. 

ಆದರೆ ಡಿಸೆಂಬರ್ ಒಂದರ ನಂತರ 4ಜಿ ಡಾಟ ಸೇವೆಗಳನ್ನು ಮುಂದುವರಿಸಲಾಗುವುದು ಎಂದು ರಿಲಯನ್ಸ್ ತಿಳಿಸಿತ್ತು.  ಇದರಲ್ಲಿ ಮುಂದುವರಿಯಲು  ಬಯಸದವರು  ಮೊಬೈಲ್ ನಂಬರ್ ರ್ಪೊರ್ಟಿಬಿಲಿಟಿ ವ್ಯವಸ್ಥೆಯನ್ನು ಉಪಯೋಗಿಸಬಹುದು ಎಂದು ಕಂಪೆನಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News