‘ಶ್ರೀಶಾಂತ್ ಬಿಸಿಸಿಐ ವಿರುದ್ಧ ಆರೋಪವನ್ನು ಹಿಂಪಡೆದುಕೊಳ್ಳಬೇಕು’
Update: 2017-11-04 23:49 IST
ಬೆಂಗಳೂರು, ನ.4: ಬಿಸಿಸಿಐ ತಾರತಮ್ಯ ಧೋರಣೆ ಹೊಂದಿದೆ ಎಂದು ಆರೋಪಿಸಿರುವ ಶ್ರೀಶಾಂತ್ ಈ ಕುರಿತು ಸಾಕಷ್ಟು ನಿದರ್ಶನ ನೀಡಬೇಕು ಎಂದು ಭಾರತದ ಮಾಜಿ ನಾಯಕ ಕಪಿಲ್‌ದೇವ್ ಅಭಿಪ್ರಾಯಪಟ್ಟಿದ್ದಾರೆ.
‘‘ಬಿಸಿಸಿಐ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಶ್ರೀಶಾಂತ್ ಯೋಚಿಸಿದ್ದರೆ, ಈ ಆರೋಪಕ್ಕೆ ಪೂರಕವಾದ ಕಾರಣ ನೀಡಬೇಕು. ಪ್ರತಿ ಕ್ರಿಕೆಟ್ ಆಟಗಾರನೂ ತನ್ನ ದೇಶಕ್ಕಾಗಿ ಆಡಬೇಕೆಂದು ಬಯಸುತ್ತಾನೆ. ಆದರೆ ಅಂತಿಮವಾಗಿ ಕೇವಲ 11 ಆಟಗಾರರಿಗೆ ಮಾತ್ರ ಆಡಲು ಸಾಧ್ಯವಾಗುತ್ತದೆ’’ ಎಂದು ಕಪಿಲ್ ಹೇಳಿದ್ದಾರೆ.
ಶ್ರೀಶಾಂತ್ ಅಭಿಪ್ರಾಯ ವೈಯಕ್ತಿಕವಾದುದು. ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದು ಕಪಿಲ್‌ದೇವ್ ಹೇಳಿದ್ದಾರೆ.