×
Ad

ಎಸ್‌ಸಿ, ಎಚ್‌ಸಿ ನ್ಯಾಯಾಧೀಶರ ತುಟ್ಟಿ ಭತ್ತೆ ಹೆಚ್ಚಳ

Update: 2017-11-05 20:53 IST

ಹೊಸದಿಲ್ಲಿ, ನ. 5: ಸುಪ್ರೀಂ ಕೋರ್ಟ್ ಹಾಗೂ 24 ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ತುಟ್ಟಿ ಭತ್ತೆ ಹೆಚ್ಚಾಗಲಿದೆ. ಆದರೆ, ಈ ನ್ಯಾಯಾಧೀಶರ ವೇತನ ಏರಿಕೆ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಇನ್ನೂ ಅನುಮೋದನೆ ನೀಡಿಲ್ಲ.

 ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್ ಹಾಗೂ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್‌ಗೆ ಕಾನೂನು ಸಚಿವಾಲಯದ ಕಾನೂನು ವಿಭಾಗ ರವಾನಿಸಿದ ಪತ್ರದಲ್ಲಿ, ಜುಲೈ 1ರಿಂದ ನ್ಯಾಯಾಧೀಶರ ತುಟ್ಟಿ ಭತ್ಯೆ ಶೇ. 139ರಷ್ಟು ಪರಿಷ್ಕರಿಸಲಾಗಿದೆ. ಇದೇ ರೀತಿ ಅಖಿಲ ಭಾರತ ಸೇವೆಯಲ್ಲಿರುವ ನ್ಯಾಯಾಧೀಶರಿಗೂ ಶೇ. 139 ಹೆಚ್ಚಿಸಲಾಗುವುದು ಎಂದಿದೆ.

ಆರನೆ ವೇತನದ ಆಯೋಗದ ಶಿಫಾರಸಿನಂತೆ ಪೂರ್ವ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುವ ಕೇಂದ್ರ ಸರಕಾರದ ಉದ್ಯೋಗಿಗಳು ಶೇ. 139 ತುಟ್ಟಿ ಭತ್ತೆ ಪಡೆಯಲು ಅರ್ಹರು ಎಂದು ಪತ್ರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News