×
Ad

ದಿಲ್ಲಿ ವಾಯು ಗುಣಮಟ್ಟ ಇಳಿಕೆ

Update: 2017-11-05 22:40 IST

ಹೊಸದಿಲ್ಲಿ, ನ. 5: ದಿಲ್ಲಿ ಹಾಗೂ ಎನ್‌ಸಿಆರ್‌ನಲ್ಲಿ ರವಿವಾರ ವಾಯು ಗುಣಮಟ್ಟ ಗಣನೀಯ ಇಳಿಕೆಯಾಗಿದೆ. ಕೆಲವು ಪ್ರದೇಶಗಳಲ್ಲಿ ಬೆಳಗ್ಗಿನ ಜಾವ ಮಾಲಿನ್ಯದ ಮಟ್ಟ ಅಂಗೀಕಾರ್ಹ ಮಟ್ಟಕ್ಕಿಂತ 12ರಿಂದ 19 ಪಟ್ಟು ಕಳಪೆಯಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ರವಿವಾರದ ವಾಯು ಗುಣಮಟ್ಟ ಸೂಚ್ಯಾಂಕದ ಪ್ರಕಾರ ಉತ್ತರ ಪ್ರದೇಶದ ಗಾಝಿಯಾಬಾದ್ ಹಾಗೂ ನೋಯ್ದಾದಲ್ಲಿ 439 (396 ಶನಿವಾರ) ಹಾಗೂ 423 (365 ಶನಿವಾರ) ಕ್ರಮ ಪ್ರಕಾರವಾಗಿ ಇತ್ತು. ರಾಜಸ್ಥಾನದ ಭೀವಾಡಿಯಲ್ಲಿ 407 (369 ಶನಿವಾರ) ಇತ್ತು. ಈ ಮಟ್ಟವನ್ನು ಗಂಭೀರ ಎಂದು ಪರಿಗಣಿಸಲಾಗಿದೆ.

ದಿಲ್ಲಿಯ ವಾಯು ಗುಣಮಟ್ಟ ತುಂಬಾ ಕಳಪೆಯಾಗಿದೆ. ವಾಯು ಗುಣಮಟ್ಟ ಸೂಚ್ಯಾಂಕದ ಪ್ರಕಾರ ದಿಲ್ಲಿಯಲ್ಲಿ ಶನಿವಾರ 351 ಇದ್ದುದು ರವಿವಾರ 368ಕ್ಕೆ ಏರಿಕೆಯಾಯಿತು. ಗುರ್ಗಾಂವ್ ನಲ್ಲಿ 338 ಇದ್ದುದು 345ಕ್ಕೆ ಏರಿಕೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News