ಖಾಸಗಿ ಜಾಹೀರಾತುಗಳಲ್ಲಿ ಪ್ರಧಾನಿ, ರಾಷ್ಟ್ರಪತಿಯ ಫೋಟೋ: ದಿಲ್ಲಿ ಹೈಕೋರ್ಟ್ ನೋಟಿಸ್

Update: 2017-11-06 14:08 GMT

ಹೊಸದಿಲ್ಲಿ, ನ.6: ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ನೀಡುತ್ತಿರುವ ವರ್ಗೀಕೃತ ಜಾಹಿರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಇತರರ ಫೋಟೋ ಹಾಗೂ ಹೆಸರನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ದಿಲ್ಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

        ಜಾಹೀರಾತಿನಲ್ಲಿ ರಾಷ್ಟ್ರಪತಿ, ಪ್ರಧಾನಿ ಹಾಗೂ ಪ್ರಧಾನ ನ್ಯಾಯಾಧೀಶರ ಫೋಟೋ ಹೊರತಾಗಿ ಇತರ ನಾಯಕರ ಫೋಟೋಗಳನ್ನು ಪ್ರಕಟಿಸುವುದನ್ನು ಈ ಹಿಂದೆ ಸುಪ್ರೀಂಕೋರ್ಟ್ ನಿರ್ಬಂಧಿಸಿತ್ತು. ಈ ಆದೇಶವನ್ನು ಮರುಪರಿಶೀಲಿಸಬೇಕೆಂದು ಕೇಂದ್ರ ಸರಕಾರ ಹಾಗೂ ಹಲವು ರಾಜ್ಯ ಸರಕಾರಗಳು ಮನವಿ ಸಲ್ಲಿಸಿದ್ದವು. ಈ ರೀತಿ ನಿರ್ಬಂಧ ವಿಧಿಸುವುದರಿಂದ ಮೂಲಭೂತ ಹಕ್ಕು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಅದರಂತೆ ತನ್ನ ಆದೇಶವನ್ನು 2016ರಲ್ಲಿ ಮಾರ್ಪಡಿಸಿದ್ದ ಸುಪ್ರೀಂಕೋರ್ಟ್, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ರಾಜ್ಯದ ಸಚಿವರ ಫೋಟೋವನ್ನು ಸರಕಾರಿ ಜಾಹೀರಾತಿನಲ್ಲಿ ಪ್ರಕಟಿಸಲು ಅವಕಾಶ ಮಾಡಿಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News