×
Ad

ಚಿರತೆ ದಾಳಿಗೆ ಇಬ್ಬರು ಮಹಿಳೆಯರು ಬಲಿ

Update: 2017-11-06 19:45 IST
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್, ನ. 6: ಜುನಾಗಢ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ಎರಡು ಪ್ರತ್ಯೇಕ ಚಿರತೆ ದಾಳಿ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

      ಗಿರ್ (ಪಶ್ಚಿಮ) ಅರಣ್ಯ ವಿಭಾಗದ ಮೆಂಡಾರ್ಡ ಗ್ರಾಮದಲ್ಲಿ 50 ವರ್ಷ ಮಹಿಳೆ ಮುಖಬೆನ್ ಕನಾನಿ ಅವರು ಚಿರತೆ ದಾಳಿಯಿಂದ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.

ಇಂತದ್ದೇ ಇನ್ನೊಂದು ಘಟನೆಯಲ್ಲಿ ಗಿರ್-ಸೋಮ್‌ನಾಥ್ ಅರಣ್ಯ ವಿಭಾಗದ ಮಾಲಿಯಾ ಗ್ರಾಮದಲ್ಲಿ ಚಿರತೆ ದಾಳಿಯಿಂದ 70 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಚಿರತೆ ದಾಳಿಗೊಳಗಾಗಿ ಮೃತಪಟ್ಟ ಮಹಿಳೆಯರನ್ನು ರಾಜುಬೆನ್ ಕೋಲಿ ಎಂದು ಗುರುತಿಸಲಾಗಿದೆ. ಮಾಲಿಯಾ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ನಿದ್ರೆಯಲ್ಲಿರುವಾಗ ಚಿರತೆ ದಾಳಿ ನಡೆಸಿದೆ ಎಂದು ಡಿಸಿಎಫ್ ಕೆ.ಎ. ಗಾಂಧಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News