ಎನ್‌ಟಿಪಿಸಿ ಬಾಯ್ಲರ್ ಸ್ಫೋಟ: ಮತ್ತೆ 3 ಸಾವು, ಮೃತರ ಸಂಖ್ಯೆ 35ಕ್ಕೇರಿಕೆ

Update: 2017-11-06 15:21 GMT

ಹೊಸದಿಲ್ಲಿ, ನ. 6: ಎನ್‌ಟಿಪಿಸಿ ಬಾಯ್ಲರ್ ಸ್ಫೋಟದಿಂದ ಸುಟ್ಟು ಗಾಯಗೊಂಡು ದಿಲ್ಲಿಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 18 ಮಂದಿಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಶೇ. 90 ಸುಟ್ಟ ಗಾಯಗಳಾದ ಸಂತೋಷ್ ಕುಮಾರ್ (40) ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಶೇ. 80 ಗಾಯಗೊಂಡ ಚಂದರ್ ಪ್ರತಾಪ್ (22) ರವಿವಾರ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡು ರವಿವಾರ ರಾತ್ರಿ ಕೃತಕ ಉಸಿರಾಟದಲ್ಲಿ ಉಸಿರಾಡುತ್ತಿದ್ದ ನಾಗೇಶ್ವರ್ (35) ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. 

ಇದರೊಂದಿಗೆ ರಾಯಬರೇಲಿಯ ಉಂಚಾಹಾರ್‌ನಲ್ಲಿ ಎನ್‌ಟಿಪಿಸಿ ವಿದ್ಯುತ್ ಘಟಕದಲ್ಲಿ ಬಾಯ್ಲರ್ ಸ್ಫೋಟಗೊಂಡು ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಗಾಯಗೊಂಡ 18 ಮಂದಿಗಳಲ್ಲಿ 10 ಮಂದಿಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದವರನ್ನು ಎಐಐಎಂಎಸ್‌ಗೆ ದಾಖಲಿಸಲಾಗಿತ್ತು. ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಸಫ್ದರ್‌ಜಂಗ್ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News