ಹಾದಿಯಾ ಸುರಕ್ಷಿತಳಾಗಿದ್ದಾಳೆ: ರಾಷ್ಟ್ರೀಯ ಮಹಿಳಾ ಆಯೋಗ

Update: 2017-11-07 04:38 GMT

ತಿರುವನಂತಪುರ, ನ. 5: ಅಖಿಲಾ ಆಲಿಯಾಸ್ ಹಾದಿಯಾ ಸುರಕ್ಷಿತವಾಗಿದ್ದಾರೆ ಇದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

 ಪ್ರಸ್ತುತ ಹೆತ್ತವರೊಂದಿಗೆ ವಾಸಿಸುತ್ತಿರುವ 24ರ ಹರೆಯದ ಹಾದಿಯಾ ಅವರ ಕೊಟ್ಟಾಯಂನಲ್ಲಿರುವ ನಿವಾಸಕ್ಕೆ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಸೋಮವಾರ ಭೇಟಿ ನೀಡಿ ಮಾತುಕತೆ ನಡೆಸಿದರು.

“ನಾನು ಅಖಿಲಾ ಆಲಿಯಾಸ್ ಹಾದಿಯಾ ಅವರನ್ನು ಭೇಟಿಯಾಗಿದ್ದೇನೆ. ಅವರು ಆರೋಗ್ಯವಂತರಾಗಿದ್ದಾರೆ. ಅವರಿಗೆ ತಂದೆ ಯಾವುದೇ ಕಿರುಕುಳ ನೀಡುತ್ತಿಲ್ಲ. ಅವರು ನಗುನಗುತ್ತಾ ಸಂತೋಷದಿಂದ ಇದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇರುವುದರಿಂದ ಹಾದಿಯಾ ಏನು ಹೇಳಿದರು ಎಂಬುದನ್ನು ನಾನು ತಿಳಿಸಲಾರೆ. ನ್ಯಾಯಾಲಯ ನಿರ್ಧಾರ ತಿಳಿಸಲಿದೆ. ಇದು ಹೊರತುಪಡಿಸಿ ಅವರ ಆರೋಗ್ಯ, ರಕ್ಷಣೆ ಉತ್ತಮವಾಗಿದೆ” ಎಂದು ಶರ್ಮಾ ಹೇಳಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ ತಂಡ ನೀಡಿದ ಹೂಗುಚ್ಛದೊಂದಿಗೆ ಹಾದಿಯಾ ಫೋಟೊ ತೆಗೆದುಕೊಂಡರು ಎಂದು ಶರ್ಮಾ ತಿಳಿಸಿದ್ದಾರೆ.

ತನ್ನ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬ ಬಗ್ಗೆ ಹಾದಿಯಾ ಚರ್ಚೆಯ ವೇಳೆ ತಿಳಿಸಿಲ್ಲ. ನವೆಂಬರ್ 27ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿರುವುದರಿಂದ ಅವರು ಅದಕ್ಕಾಗಿ ಕಾಯುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News