ಉಪಗ್ರಹ ಉಡಾವಣೆ ದ್ವಿಗುಣಕ್ಕೆ ಇಸ್ರೊ ನಿರ್ಧಾರ

Update: 2017-11-06 17:28 GMT

 ಹೈದರಾಬಾದ್, ನ. 6: ತಾನು ನಿರ್ಮಿಸುತ್ತಿರುವ ಉಪಗ್ರಹಗಳ ಉಡಾವಣೆ ದ್ವಿಗುಣಗೊಳಿಸಲು ಹೊರಗುತ್ತಿಗೆ ನೀಡಲು ಇಸ್ರೊ ಚಿಂತಿಸುತ್ತಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಬಾಹ್ಯಾಕಾಶ ಯೋಜನೆಗೆ ಉಪಗ್ರಹ ನಿರ್ಮಾಣಕ್ಕೆ ಕೈಜೋಡಿಸುತ್ತಿರುವ ಪ್ರಮುಖ ಸಂಸ್ಥೆ ಇಸ್ರೊ ಸೆಟಲೈಟ್ ಸೆಂಟರ್ (ಐಎಸ್‌ಎಸಿ) ನಿರ್ದೇಶಕ ಮೇಲ್‌ಸ್ವಾಮಿ ಅಣ್ಣಾದುರೈ, ಪ್ರಸ್ತುತ ಇಸ್ರೊ ತಾನು ನಿರ್ಮಿಸಿದ 9ರಿಂದ 10 ಉಪಗ್ರಹಗಳನ್ನು ಪ್ರತಿವರ್ಷ ಉಡಾಯಿಸುತ್ತಿದೆ ಎಂದಿದ್ದಾರೆ.

ಅವಶ್ಯಕತೆಗಳು ಹೆಚ್ಚಿವೆ. 2018-19ನೆ ವರ್ಷದಲ್ಲಿ ಉಡಾಯಿಸುವ ಉಪಗ್ರಹಗಳ ಸಂಖ್ಯೆಯನ್ನು 18ಕ್ಕೆ ಏರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News