ಐಪಿಎಲ್‌ನಲ್ಲಿ ಮುನ್ರೊ ಭಾರೀ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ

Update: 2017-11-06 18:10 GMT

ಚೆನ್ನೈ,ನ.6: ನ್ಯೂಝಿಲೆಂಡ್‌ನ ಸ್ಫೋಟಕ ದಾಂಡಿಗ ಮತ್ತು ಮಧ್ಯಮ ವೇಗಿ ಕಾಲಿನ್ ಮುನ್ರೊ ಅವರು ಮುಂದಿನ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಗೆ ಆಟಗಾರರ ಹರಾಜಿನ ವೇಳೆ ಭಾರೀ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.

 ರಾಜ್‌ಕೋಟ್‌ನಲ್ಲಿ ಭಾರತ ವಿರುದ್ಧದ ಎರಡನೆ ಟ್ವೆಂಟಿ-20ಪಂದ್ಯದಲ್ಲಿ ಮುನ್ರೋ ಅಜೇಯ 109 ರನ್ ಗಳಿಸಿ ಬಳಿಕ ಗಮನ ಸೆಳೆದಿದ್ದಾರೆ. ಮುನ್ರೊ ಅವರು 2016ರಲ್ಲಿ ಕೋಲ್ಕತಾ ನೈಟ್ ರೈಡರ್ಸ್‌(ಕೆಕೆಆರ್) ತಂಡದಲ್ಲಿದ್ದರು. ಆದರೆ 2017ರ ಅವೃತ್ತಿಯಲ್ಲಿ ಅವರನ್ನು ತಂಡದಿಂದ ತೆರವುಗೊಳಿಸಲಾಗಿತ್ತು. ಕಳೆದ ಆವೃತ್ತಿಯಲ್ಲಿ ಮುನ್ರೊ ಹರಾಜಾಗಲಿಲ್ಲ. ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್)ನಲ್ಲಿ ಸ್ಟಾರ್ ಆಟಗಾರನಾಗಿ ಗಮನ ಸೆಳೆಯುವುದನ್ನು ನಿರೀಕ್ಷಿಸಲಾಗಿದೆ. ಇದರ ಜೊತೆಗೆ 2018ರ ಐಪಿಎಲ್ ಹರಾಜಿನಲ್ಲಿ ಅವರಿಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಕಂಡು ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News