ಎಸ್.ಗುರುಮೂರ್ತಿ ಎಂಬ ಬುದ್ಧಿಜೀವಿ ಹಾಗೂ ಸುಳ್ಳುಸುದ್ದಿಗಳು

Update: 2017-11-07 09:41 GMT

 ಹೆಚ್ಚುಕಡಿಮೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿನ ಕಟ್ಟುಕಥೆಗಳಿಗೆ ಮರುಳಾಗಿದ್ದಾರೆ ಮತ್ತು ಅದನ್ನು ಶೇರ್ ಕೂಡ ಮಾಡಿಕೊಂಡಿದ್ದಾರೆ. ಕೆಲವರು ಇತರರಿಗಿಂತ ಹೆಚ್ಚು ಇಂತಹ ಕಟ್ಟುಕಥೆಗಳಿಗೆ ಬಲಿಯಾಗುತ್ತಾರೆ. ಕಟ್ಟುಕಥೆಗಳೆಂದು ಮೇಲ್ನೋಟಕ್ಕೇ ಗೊತ್ತಾಗುತ್ತಿದ್ದರೂ ಅವುಗಳಿಗೆ ಬಲಿಯಾಗುವವರೂ ಇದ್ದಾರೆ. ಅದು ಉದ್ದೇಶಪೂರ್ವಕ ಪ್ರಚಾರವಾಗಿರಲಿ ಅಥವಾ ಅನುದ್ದಿಷ್ಟವಾಗಿ ಶೇರ್ ಮಾಡಿಕೊಂಡಿರಲಿ, ಸುದ್ದಿಯು ಸುಳ್ಳು ಎನ್ನುವುದು ಗೊತ್ತಾದ ನಂತರ ಪ್ರತಿಕ್ರಿಯೆ ನಿಜಕ್ಕೂ ಆಸಕ್ತಿಪೂರ್ಣವಾಗಿರುತ್ತದೆ. ಒಂದು ಕಡೆ ಕ್ಷಮೆ ಕೋರುವವರು, ಸುಳ್ಳುಸುದ್ದಿಗಳನ್ನು ಹಿಂದೆಗೆದುಕೊಳ್ಳುವವರು, ವಿಷಾದ ವ್ಯಕ್ತಪಡಿಸುವವ ರಿದ್ದರೆ, ಇನ್ನೊಂದೆಡೆ ಈ ಸುಳ್ಳುಸುದ್ದಿಗಳಿಗೆ ಅಂಟಿಕೊಂಡು ಅದನ್ನು ತಮ್ಮ ಫಾಲೋವರ್ ಗಳು ಹರಡುವುದನ್ನು ನೋಡುವವವರೂ ಇರುತ್ತಾರೆ. ಆಲ್ಟ್ ನ್ಯೂಸ್ ಸ್ವದೇಶಿ ಜಾಗರಣ್ ಮಂಚ್‌ನ ಸಹ ಸಂಚಾಲಕ ಎಸ್.ಗುರುಮೂರ್ತಿಯವರ ಆಸಕ್ತಿಕರ ಪ್ರಕರಣವನ್ನು ಮುಂದಿರಿಸಿದೆ. ಗುರುಮೂರ್ತಿ ಪದೇಪದೇ ಸುಳ್ಳುಸುದ್ದಿಗಳಿಗೆ ಬಲಿಯಾಗಿದ್ದಾರೆ. ಇಲ್ಲಿವೆ ಕೆಎಲವು ಉದಾಹರಣೆಗಳು......

► ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದ ಮೊದಲ ದೇಶವಾಗಿದೆ ಎಂಬ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದ ಗುರುಮೂರ್ತಿ ಇದಕ್ಕೆ ಉದಾರವಾದಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ತಾನು ಸುಳ್ಳುಸುದ್ದಿಯೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ಈ ಸುಳ್ಳುಸುದ್ದಿ 2013 ರಿಂದಲೂ ಹರಿದಾಡುತ್ತಿದ್ದು, ಗುರುಮೂರ್ತಿಯಂತಹ ಜನರಿಂದಾಗಿ ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ತಲೆ ಎತ್ತುತ್ತಲೇ ಇದೆ. ಗುರುಮೂರ್ತಿ ನಿರೀಕ್ಷಿಸಿದ್ದಂತೆ ಯಾವುದೇ ಉದಾರವಾದಿ ಬೊಬ್ಬೆ ಹೊಡೆದಿರಲಿಲ್ಲ, ಬಹುಶಃ ಅವರು ಈ ಸುಳ್ಳುಸುದ್ದಿಯನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿರಬೇಕು.

► ರಾಹುಲ್ ಗಾಂಧಿಯವರ ಎಡಿಟೆಡ್ ವೀಡಿಯೊವೊಂದನ್ನು ಶೇರ್ ಮಾಡಿಕೊ ಳ್ಳುವಾಗ ಗುರುಮೂರ್ತಿ ‘ಇದು ನಿಜವಾಗಿದ್ದರೆ’ ಎಂಬ ಶಬ್ದಗಳನ್ನು ಬಳಸಿದ್ದರು. ‘ಕೇಳಿ ಮತ್ತು ನೀವೇ ಯೋಚನೆ ಮಾಡಿ’ ಎಂದೂ ಬರೆದಿದ್ದರು. ಇಂತಹ ನಕಲಿ ವೀಡಿಯೊ ಗಳಿಗೆ ಯಾರು ಬಲಿಯಾಗುತ್ತಾರೆ ಮತ್ತು ಅದು ‘ಸುಳ್ಳು’ಎಂದು ಗೊತ್ತಾದ ಮೇಲೂ ತನ್ನ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸುವವರು ಯಾರು ಎನ್ನುವುದನ್ನು ನೀವೇ ಯೋಚಿಸಿ.

ಈ ವೀಡಿಯೊವನ್ನು @superlonday ಒಂದು ತಮಾಷೆಯಾಗಿ ಮೊದಲು ಶೇರ್ ಮಾಡಿಕೊಂಡಿತ್ತು. ಗುರುಮೂರ್ತಿ ಮತ್ತು ಅವರ ಟ್ವೀಟ್‌ನ್ನು ಶೇರ್ ಮಾಡಿಕೊಂಡಿದ್ದ ಸಾವಿರ ಜನರಿಗೆ ಇದು ಗೊತ್ತೇ ಇರಲಿಲ್ಲ.

► 2000 ರೂ.ನೋಟಿನಲ್ಲಿ ನ್ಯಾನೋ ಚಿಪ್ ಅಳವಡಿಸಲಾಗಿದೆ ಎಂಬ ಸುಳ್ಳುಸುದ್ದಿಗೆ ಬಲಿ ಬಿದ್ದವರು ಯಾರೆಂದು ಊಹಿಸಬಲ್ಲಿರಾ? ಹೌದು, ಇದೇ ಗುರುಮೂರ್ತಿ ಆ ವ್ಯಕ್ತಿ. ನೋಟು ಅಮಾನ್ಯ ಕ್ರಮ ಭಾರತವನ್ನು ಉದ್ಧರಿಸುತ್ತದೆ ಎಂದು ಗಟ್ಟಿಯಾಗಿ ನಂಬಿಕೊಂಡಿರುವ ಅವರಿಗೆ ಇದೂ ಒಂದು ನಂಬಲರ್ಹ ಸುದ್ದಿ ಎಂದು ಕಂಡುಬಂದಿತ್ತು.

ಹೊಸನೋಟುಗಳಲ್ಲಿ ಶೀಘ್ರವೇ ಇಂತಹ ವೈಶಿಷ್ಟ ಬರಲಿದೆ ಎಂದು ಅವರು ಇನ್ನೂ ನಂಬಿಕೊಂಡಿದ್ದಾರೆ.

► ಗುರುಮೂರ್ತಿಯವರ ಕಥೇ ಇಲ್ಲಿಗೇ ಮುಗಿಯಲಿಲ್ಲ. ಅವರು ಖ್ಯಾತ ಸಂಗೀತಕಾರ ಎ.ಆರ್.ರೆಹಮಾನ್ ಕುರಿತ ಸುಳ್ಳುಸುದ್ದಿಯನ್ನೂ ಶೇರ್ ಮಾಡಿಕೊಂಡಿ ದ್ದರು. ‘ಇದನ್ನು ಓದಿರಿ ಮತ್ತು ಶೇರ್ ಮಾಡಿ’ ಎಂದು ಅವರು ಬರೆದಿದ್ದರು ಮತ್ತು ಸುಮಾರು 2800 ಜನರು ತಮ್ಮ ಬುದ್ಧಿಗೆ ಯಾವುದೇ ಕೆಲಸವನ್ನು ಕೊಡದೆ ಶೇರ್ ಮಾಡಿಕೊಂಡಿದ್ದರು. ಸುಳ್ಳುಸುದ್ದಿಗಳನ್ನು ಹರಡುವುದರಲ್ಲಿ ಕುಖ್ಯಾತಿ ಪಡೆದಿರುವ ಪೋಸ್ಟ್‌ಕಾರ್ಡ್ ನ್ಯೂಸ್ ಈ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿತ್ತು ಎನ್ನುವ ವಿಷಯವೂ ಗುರುಮೂರ್ತಿಯವರಿಗೆ ಇದೊಂದು ಸುಳ್ಳು ಸುದ್ದಿ ಎಂಬ ಅರಿವನ್ನು ಮೂಡಿಸಿರಲಿಲ್ಲ.

 2000 ರೂ.ನೋಟಿನಲ್ಲಿ ನ್ಯಾನೋ ಚಿಪ್‌ನಿಂದ ಹಿಡಿದು ಪೋಸ್ಟ್‌ಕಾರ್ಡ್ ನ್ಯೂಸ್‌ನ ತಮಾಷೆಗಳವರೆಗೆ ಅತ್ಯಂತ ಗೌರವಾನ್ವಿತ ಬಲಪಂಥೀಯ ಸಿದ್ಧಾಂತವಾದಿಗಳಲ್ಲಿ ಓರ್ವ ರಾಗಿರುವ, ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕರಾಗಿರುವ ಗುರುಮೂರ್ತಿ ಯವರಂತಹ ಬುದ್ಧಿಜೀವಿಗಳು ಕಟ್ಟುಕಥೆಗಳಿಗೆ ಬಲಿಯಾಗುತ್ತಾರೆ ಎನ್ನುವುದು ದೊಡ್ಡ ವ್ಯಂಗ್ಯವೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News