ಹಿಂದೂಗಳ ಭಾವನೆಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ: ಕಮಲ್

Update: 2017-11-07 12:25 GMT

ಚೆನ್ನೈ, ನ.7 : ಹಿಂದೂಗಳ ಭಾವನೆಗಳಿಗೆ ಘಾಸಿಯುಂಟು ಮಾಡುವ ಉದ್ದೇಶ ತನಗಿಲ್ಲ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ಯಾವುದೇ ಹಿಂಸೆಯನ್ನು ತಾನು ವಿರೋಧಿಸುವುದಾಗಿ ನಟ ಕಮಲ್ ಹಾಸನ್ ಹೇಳಿದರು.

ತಮ್ಮ 63ನೇ ಹುಟ್ಟುಹಬ್ಬದ ಸಂರ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾವು ರಾಜಕೀಯ ಸೇರುವ ಕುರಿತಾದ ಘೋಷಣೆಗೆ ಎಲ್ಲರೂ ಎದುರು ನೀಡುತ್ತಿರುವುದನ್ನು ಮನಗಂಡು ‘‘ನಾನೀಗಾಗಲೇ ಇಲ್ಲಿದ್ದೇನೆ’’ (ರಾಜಕೀಯದಲ್ಲಿ ಈಗಾಗಲೇ ಇದ್ದೇನೆ) ಎಂದರಲ್ಲದೆ ಈ ವಿಚಾರದಲ್ಲಿ ತಜ್ಞರ ಜತೆ ಚರ್ಚೆ ನಡೆಸುತ್ತಿರುವುದಾಗಿ ಹೇಳಿದರು.

ತಾನೊಂದು ಡಿಜಿಟಲ್ ವೇದಿಕೆಯನ್ನು ಆರಂಭಿಸುತ್ತಿರುವುದಾಗಿ ಘೋಷಿಸಿದ ಕಮಲ್ ಈ ಆ್ಯಪ್ 'ವಿಶಲ್ ಬ್ಲೋವರ್' ಆಗಿ ಕೆಲಸ ನಿರ್ವಹಿಸಲಿದೆ ಎಂದರು. ಜನರು ತಮ್ಮ ಸಮಸ್ಯೆಗಳನ್ನು ಇಲ್ಲಿ ಹಂಚಿಕೊಂಡು ಅದರ ಪರಿಹಾರಕ್ಕೆ ಯತ್ನಿಸಬಹುದು. ಈ ಆ್ಯಪ್ ನ ಹೆಸರು ಕೆಎಚ್ ಆಗಿದ್ದು, ಇದರ ಸಂಪೂರ್ಣ ಚಿತ್ರಣ ಜನವರಿಯಲ್ಲಿ ಹೊರಬರಲಿದೆ ಎಂದರು

ತಮಿಳು ಸಾಪ್ತಾಹಿಕವೊಂದರಲ್ಲಿ ಕಳೆದ ವಾರ ಅವರು ಬರೆದಿರುವ ಲೇಖನವೊಂದರ ಬಗ್ಗೆ ಪ್ರತಿಕ್ರಿಯಿಸಿದ ಕಮಲ್, ತಾನು ಉಗ್ರವಾದ ಪದವನ್ನು ಉಪಯೋಗಿಸಿಯೇ ಇಲ್ಲ. ಸಭಾಂಗಣದಲ್ಲಿ ಅಥವಾ ದೇಶದಲ್ಲಿ ಅದೆಷ್ಟು ಹಿಂದೂಗಳಿದ್ದಾರೆಂಬುದರ ಬಗ್ಗೆ ನನಗೆ ಪರಿವೆಯಿಲ್ಲ ಆದರೆ ಮನೆಯಲ್ಲಿರುವವರ ಬಗ್ಗೆ ಕಾಳಜಿಯಿದೆ. ಅವರು ತನಗೆ ಪ್ರೀತಿಯೆಂಬ ಆಯುಧವನ್ನು ನಿರಾಕರಿಸಿದರೆ ನಾನು ಕಣ್ಣೀರು ಹಾಕುತ್ತೇನೆ’’ ಎಂದು ಕಮಲ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News