ಶಾಲೆಗೆ ನುಗ್ಗಿದ ಕಾರು; ಇಬ್ಬರು ಮಕ್ಕಳು ಮೃತ್ಯು

Update: 2017-11-07 15:40 GMT

ಸಿಡ್ನಿ (ಆಸ್ಟ್ರೇಲಿಯ), ನ. 7: ಆಸ್ಟ್ರೇಲಿಯದ ಸಿಡ್ನಿಯಲ್ಲಿ ಮಂಗಳವಾರ ಕಾರೊಂದು ಶಾಲೆಯೊಂದರ ತರಗತಿ ಕೋಣೆಗೆ ನುಗ್ಗಿದಾಗ ಎಂಟು ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ ಹಾಗೂ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಶ್ಚಿಮ ಸಿಡ್ನಿಯಲ್ಲಿರುವ ಪ್ರಾಥಮಿಕ ಶಾಲೆಯ ಮರದ ಗೋಡೆಯನ್ನು ಮುರಿದು ಕಾರು ತರಗತಿಗೆ ನುಗ್ಗಿದಾಗ 24 ಮಕ್ಕಳು ಮತ್ತು ಅವರ ಶಿಕ್ಷಕ ಅಲ್ಲಿದ್ದರು ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದರು.

16 ಮಕ್ಕಳು ಮತ್ತು ಶಿಕ್ಷಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News