×
Ad

ಕಿವೀಸ್ ವಿರುದ್ಧ ಭಾರತಕ್ಕೆ ಸರಣಿ ಜಯ

Update: 2017-11-07 23:10 IST

ತಿರುವನಂತಪುರ, ನ.7: ನ್ಯೂಝಿಲೆಂಡ್ ವಿರುದ್ಧದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 6 ರನ್‌ಗಳ ಜಯ ಗಳಿಸಿದ್ದು,  ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

 ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಇಂದು ನಡೆದ ಮಳೆಬಾಧಿತ ಪಂದ್ಯದಲ್ಲಿ ಗೆಲುವಿಗೆ 68 ರನ್ ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ನಿಗದಿತ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 61 ರನ್ ಗಳಿಸಿತು.

.ಮಾರ್ಟಿನ್ ಗಪ್ಟಿಲ್ 1ರನ್, ಕಾಲಿನ್ ಮುನ್ರೊ 7ರನ್, ಕೇನ್ ವಿಲಿಯಮ್ಸನ್ 8ರನ್, ಫಿಲಿಪ್ಸ್ 11ರನ್, ನಿಕೋಲ್ಸ್ 2 ರನ್ ಬ್ರೂಸ್ 4ರನ್ ಗಳಿಸಿ ಔಟಾದರು., ಗ್ರ್ಯಾಂಡ್ ಹೋಮ್ ಔಟಾಗದೆ 17 ರನ್ ಗಳಿಸಿದರು.

ಭಾರತದ ಬುಮ್ರಾ 2 ವಿಕೆಟ್ , ಭುವನೇಶ್ವರ ಕುಮಾರ್ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.. ಮೊದಲ ಬಾರಿ ನಡೆದ ಪಂದ್ಯ ಭಾರೀ ಮಳೆಯಿಂದಾಗಿ ಎರಡೂವರೆ ಗಂಟೆ ತಡವಾಗಿ ಆರಂಭಗೊಂಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News