×
Ad

ಸೈನಾ ಸಿಂಧು ಫೈನಲ್ ಫೈಟ್

Update: 2017-11-07 23:56 IST

ನಾಗ್ಪುರ, ನ.7: ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಸೀನಿಯರ್ ಬ್ಯಾಡ್ಮಿಂಟನ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪ್ರಸ್ತುತ ವಿಶ್ವದ ನಂ.11ನೆ ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ಐದನೆ ಶ್ರೇಯಾಂಕದ ಅನುರಾ ಪ್ರಭುದೇಸಾಯಿ ವಿರುದ್ಧ 21-11, 21-10 ಸೆಟ್‌ಗಳಿಂದ ಜಯ ಸಾಧಿಸಿದರು. ವಿಶ್ವದ ನಂ.2ನೆ ಆಟಗಾರ್ತಿ ಸಿಂಧು ಮತ್ತೊಂದು ಸೆಮಿ ಫೈನಲ್‌ನಲ್ಲಿ ಋತ್ವಿಕ್ ಶಿವಾನಿ ವಿರುದ್ಧ 17-21, 21-15, 21-11 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಸೈನಾ 2006 ಹಾಗೂ 2007ರಲ್ಲಿ ಸತತ ಪ್ರಶಸ್ತಿ ಜಯಿಸಿದ ಬಳಿಕ ಸೀನಿಯರ್ ನ್ಯಾಶನಲ್ ಟೂರ್ನಿಯಲ್ಲಿ ಭಾಗವಹಿಸಿಲ್ಲ. 2011 ಹಾಗೂ 2013ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿರುವ ಸಿಂಧು ದೇಶೀಯ ಟೂರ್ನಿಯಿಂದ ದೂರ ಉಳಿದಿದ್ದರು. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿ.(ಬಿಪಿಸಿಎಲ್) ಉದ್ಯೋಗಿಯಾಗಿರುವ ಸೈನಾ ಹಾಗೂ ಸಿಂಧು 2 ಬಾರಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಸೆಣಸಾಡಿದ್ದರು. 2014ರಲ್ಲಿ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಹಾಗೂ ಈ ವರ್ಷ ಇಂಡಿಯ ಸೂಪರ್ ಸರಣಿಯಲ್ಲಿ ಈ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದರು.

2014ರಲ್ಲಿ ಸೈನಾ ಹಾಗೂ ಕಳೆದ ವರ್ಷ ಸಿಂಧು ಚಾಂಪಿಯನ್ ಆಗಿದ್ದರು.

ಸಿಂಧು ಪ್ರಸ್ತುತ ಭರ್ಜರಿ ಫಾರ್ಮ್ ನಲ್ಲಿದ್ದು ಈ ವರ್ಷ ಇಂಡಿಯಾ ಓಪನ್ ಹಾಗೂ ಕೊರಿಯಾ ಓಪನ್ ಜಯಿಸಿದ್ದರು. ಗ್ಲಾಸ್ಗೊ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದರು.

27ರ ಹರೆಯದ ಸೈನಾ 2015ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು. ಗಾಯದ ಸಮಸ್ಯೆಯಿಂದಾಗಿ ರಿಯೋ ಗೇಮ್ಸ್ ನಿಂದ ದೂರ ಉಳಿದಿದ್ದರು. ಮಂಡಿ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಬ್ಯಾಡ್ಮಿಂಟನ್‌ನಿಂದ ದೂರ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News