×
Ad

ಕಪ್ಪುಹಣವನ್ನು ಬಿಳಿಯಾಗಿಸಲು ನೆರವಾದ ನೋಟು ನಿಷೇಧ: ಲಾಲು

Update: 2017-11-08 18:33 IST

ಪಾಟ್ನಾ,ನ.8: ನೋಟು ಅಮಾನ್ಯದ ಮೊದಲ ವರ್ಷಾಚರಣೆಯ ದಿನವಾದ ಬುಧವಾರ ಬಿಜೆಪಿಯ ವಿರುದ್ಧ ತೀವ್ರ ದಾಳಿ ನಡೆಸಿದ ಆರ್‌ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರು, ಈ ಕ್ರಮವು ಅತ್ಯಂತ ಸುಲಭವಾಗಿ ಕಪ್ಪುಹಣವನ್ನು ಬಿಳಿಯಾಗಿಸುವ ಉದ್ದೇಶವನ್ನು ಈಡೇರಿಸಿತ್ತು ಎಂದು ಹೇಳಿದರು.

ನೋಟು ಅಮಾನ್ಯವನ್ನು ವಿರೋಧಿಸಿ ಆರ್‌ಜೆಡಿ ಬಿಹಾರದಾದ್ಯಂತ ರ್ಯಾಲಿಗಳು ಮತ್ತು ಮತಪ್ರದರ್ಶನಗಳನ್ನು ಹಮ್ಮಿಕೊಂಡಿತ್ತು.

ಬಡವರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ನಂಬಿಸಿ ಅವರನ್ನು ಮೂರ್ಖರನ್ನಾಗಿಸಲಾಗಿತ್ತು ಎಂದ ಲಾಲು, ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ನಿರ್ಧಾರವನ್ನು ಪ್ರಕಟಿಸಿ ಇಂದಿಗೆ ಸರಿಯಾಗಿ ಒಂದು ವರ್ಷವಾಗಿದೆ. ಇದು ಕಪ್ಪುಹಣದ ವಿರುದ್ಧ ಮಹತ್ವದ ಕ್ರಮವಾಗಿದೆ ಎಂದು ಬಿಂಬಿಸಲಾಗಿತ್ತಾದರೂ, ಎಷ್ಟು ಕಪ್ಪುಹಣವನ್ನು ತಾನು ಬಯಲಿಗೆಳೆದಿದ್ದೇನೆ ಎನ್ನುವುದನ್ನು ಜನರಿಗೆ ತಿಳಿಸಲು ಸರಕಾರಕ್ಕೆ ಈವರೆಗೆ ಸಾಧ್ಯವಾಗಿಲ್ಲ ಎಂದರು.

 ನೋಟು ಅಮಾನ್ಯ ವರ್ಷಾಚರಣೆಯ ಮೂಲಕ ಬಿಜೆಪಿ ಕಾರ್ಯಕರ್ತರು ಸ್ವತಃ ಭ್ರಮೆಗೊಳಗಾಗಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ತಪ್ಪು ಲೆಕ್ಕಾಚಾರದ ಹೆಜ್ಜೆ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News