×
Ad

ಮಾನಸಿಕ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಟೆಕ್ಸಾಸ್ ಚರ್ಚ್ ಶೂಟರ್

Update: 2017-11-08 22:00 IST

ವಾಶಿಂಗ್ಟನ್, ನ. 8: ಟೆಕ್ಸಾಸ್ ಚರ್ಚ್‌ನಲ್ಲಿ ರವಿವಾರ 26 ಮಂದಿಯನ್ನು ಗುಂಡು ಹಾರಿಸಿ ಕೊಂದ ಡೆವಿನ್ ಪ್ಯಾಟ್ರಿಕ್ ಕೆಲ್ಲಿ 2012ರಲ್ಲಿ ವಾಯುಪಡೆ ನೆಲೆಯೊಂದಕ್ಕೆ ಬಂದೂಕುಗಳನ್ನು ಒಯ್ದಿದ್ದನು ಹಾಗೂ ಮಾನಸಿಕ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದನು ಎಂದು ಪೊಲೀಸ್ ವರದಿಯೊಂದು ತಿಳಿಸಿದೆ.

ತನ್ನ ಅತ್ತೆಯೊಂದಿಗೆ ಸುದೀರ್ಘ ಕಾಲದ ವೈಮನಸ್ಸು ಹೊಂದಿದ್ದ ಕೆಲ್ಲಿ, ರವಿವಾರ ಸುದರ್‌ಲ್ಯಾಂಡ್ ಸ್ಪ್ರಿಂಗ್ಸ್ ಎಂಬ ಸಣ್ಣ ಪಟ್ಟಣದ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಹತ್ಯಾಕಾಂಡ ನಡೆಸಿದನು. ಆತನ ಅತ್ತೆಯೂ ಇದೇ ಚರ್ಚ್‌ಗೆ ಬಂದಿದ್ದರು. ಆತ ಬಳಿಕ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾದನು.

ವಾಯುಪಡೆಯು ಆತನನ್ನು ಕೋರ್ಟ್ ಮಾರ್ಶಲ್‌ಗೆ ಒಳಪಡಿಸಿ ಬಿಡುಗಡೆಗೊಳಿಸಿತ್ತು. 2012 ಜೂನ್‌ನಲ್ಲಿ ಆತ ನ್ಯೂ ಮೆಕ್ಸಿಕೊದಲ್ಲಿರುವ ಮಾನಸಿಕ ಅಸ್ವಸ್ತರ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News