ಫೆಡರರ್‌ಗೆ ಝ್ವೆರೆವ್ ಎದುರಾಳಿ

Update: 2017-11-08 18:16 GMT

ಲಂಡನ್, ನ.8: ಆರು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಮುಂದಿನ ವಾರ ಆರಂಭವಾಗಲಿರುವ ಎಟಿಪಿ ಟೂರ್ ಫೈನಲ್ಸ್ ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಟೂರ್ ಫೈನಲ್ಸ್‌ಗೆ ಡ್ರಾ ಪ್ರಕ್ರಿಯೆ ಬುಧವಾರ ಆತಿಥೇಯ ನಗರ ಲಂಡನ್‌ನಲ್ಲಿ ನಡೆದಿದೆ.

ವಿಶ್ವದ ನಂ.1 ರಫೆಲ್ ನಡಾಲ್ ಮಂಡಿನೋವಿನಿಂದ ಚೇತರಿಸಿಕೊಂಡು ವರ್ಷಾಂತ್ಯದ ಪ್ರಮುಖ ಟೂರ್ನಿಯಲ್ಲಿ ಸ್ಪರ್ಧಿಸುವ ವಿಶ್ವಾಸದಲ್ಲಿದ್ದಾರೆ. ನಡಾಲ್ ಬೆಲ್ಜಿಯಂನ ಡೇವಿಡ್ ಗಫಿನ್, ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ ಹಾಗೂ ಆಸ್ಟ್ರೇಲಿಯದ ಡೊಮಿನಿಕ್ ಥೀಮ್ ಅವರನ್ನೊಳಗೊಂಡ ಬೊರಿಸ್ ಬೆಕೆರ್ ಗ್ರೂಪ್‌ನಲ್ಲಿದ್ದಾರೆ.

ಫೆಡರರ್ ಇರುವ ಪೀಟ್ ಸಾಂಪ್ರಾಸ್ ಗುಂಪಿನಲ್ಲಿ ಝ್ವೆರೆವ್‌ರಲ್ಲದೆ, ಕ್ರೊಯೇಷಿಯದ ಮರಿನ್ ಸಿಲಿಕ್, ಅಮೆರಿಕದ ಜಾಕ್ ಸಾಕ್ ಅವರಿದ್ದಾರೆ.

20ರ ಹರೆಯದ ಝ್ವೆರೆವ್ ಈ ವರ್ಷ ಎರಡು ಮಾಸ್ಟರ್ಸ್‌ ಇವೆಂಟ್ಸ್ ಸೇರಿದಂತೆ ಒಟ್ಟು 5 ಪ್ರಶಸ್ತಿಗಳನ್ನು ಜಯಿಸುವ ಮೂಲಕ ವಿಶ್ವ ರ್ಯಾಂಕಿಂಗ್‌ನಲ್ಲಿ ಮೂರನೆ ಸ್ಥಾನಕ್ಕೇರಿದ್ದಾರೆ. ಈಮೂಲಕ ಪುರುಷರ ಟೆನಿಸ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಝ್ವೆರೆವ್, ಡಿಮಿಟ್ರೊವ್ ಹಾಗೂ ಗಫಿನ್ ಇದೇ ಮೊದಲ ಬಾರಿ ಟೂರ್ನಮೆಂಟ್‌ನಲ್ಲಿ ಆಡುತ್ತಿದ್ದಾರೆ.

ಈ ವರ್ಷದ ಟೂರ್ನಮೆಂಟ್‌ನಲ್ಲಿ 2016ರ ವಿನ್ನರ್ ಆ್ಯಂಡಿ ಮರ್ರೆ, ನಾಲ್ಕು ಬಾರಿ ಪ್ರಶಸ್ತಿ ವಿಜೇತ ನೊವಾಕ್ ಜೊಕೊವಿಕ್ ಹಾಗೂ ಸ್ಟಾನ್ ವಾವ್ರಿಂಕ ಭಾಗವಹಿಸುತ್ತಿಲ್ಲ.

ವಿಶ್ವ ರ್ಯಾಂಕಿಂಗ್ ಆಧಾರದಲ್ಲಿ ಗುಂಪುಗಳ ವಿಭಜನೆ

ಪೀಟ್ ಸಾಂಪ್ರಾಸ್ ಗ್ರೂಪ್

►ರೋಜರ್ ಫೆಡರರ್-ಸ್ವಿಟ್ಝರ್ಲೆಂಡ್(2)

►ಅಲೆಕ್ಸಾಂಡರ್ ಝ್ವೆರೆವ್-ಜರ್ಮನಿ(3)

►ಮರಿನ್ ಸಿಲಿಕ್-ಕ್ರೊಯೇಷಿಯ(5)

►ಜಾಕ್ ಸಾಕ್-ಅಮೆರಿಕ(9)

ಬೊರಿಸ್ ಬೆಕೆರ್ ಗ್ರೂಪ್

►ರಫೆಲ್ ನಡಾಲ್-ಸ್ಪೇನ್(1)

►ಡೊಮಿನಿಕ್ ಥೀಮ್-ಆಸ್ಟ್ರೀಯ(4)

►ಗ್ರಿಗೊರ್ ಡಿಮಿಟ್ರೊವ್-ಬಲ್ಗೇರಿಯ(6)

►ಡೇವಿಡ್ ಗಫಿನ್-ಬೆಲ್ಜಿಯಂ(8)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News