ಶ್ರೀಲಂಕಾ ಕ್ರಿಕೆಟ್ ತಂಡ ಕೊಲ್ಕತಾಕ್ಕೆ ಆಗಮನ

Update: 2017-11-08 18:26 GMT

ಕೋಲ್ಕತಾ, ನ.8: ಶ್ರೀಲಂಕಾ ಕ್ರಿಕೆಟ್ ತಂಡ ಭಾರತ ವಿರುದ್ಧ ಆರು ವಾರಗಳ ಸುದೀರ್ಘ ಕ್ರಿಕೆಟ್ ಪ್ರವಾಸಕ್ಕಾಗಿ ಬುಧವಾರ ಭಾರತಕ್ಕೆ ಆಗಮಿಸಿದೆ. ನ.16 ರಂದು ಮೊದಲ ಟೆಸ್ಟ್ ಪಂದ್ಯವನ್ನು ಆಡುವುದರೊಂದಿಗೆ ಭಾರತ ಪ್ರವಾಸ ಆರಂಭಿಸಲಿದೆ. ಶ್ರೀಲಂಕಾ ತಂಡ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡದ ವಿರುದ್ಧ ಮೂರು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಪಂದ್ಯಗಳ ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿ ಆಡಲಿದೆ.

15 ಸದಸ್ಯರನ್ನು ಒಳಗೊಂಡ ಶ್ರೀಲಂಕಾ ತಂಡ ಗುರುವಾರದಿಂದ ನೆಟ್ ಪ್ರಾಕ್ಟೀಸ್ ಆರಂಭಿಸಲಿದೆ. ನ.11 ರಂದು ಬೋರ್ಡ್ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧ ದ್ವಿದಿನ ಅಭ್ಯಾಸ ಪಂದ್ಯವನ್ನು ಆಡಲಿದೆ.

ಶ್ರೀಲಂಕಾ ತಂಡ ಏಳು ವರ್ಷಗಳ ಹಿಂದೆ 2009ರಲ್ಲಿ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಆಡಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 0-2 ರಿಂದ ಸೋತಿತ್ತು. ಈ ವರ್ಷಾರಂಭದಲ್ಲಿ ಭಾರತ ತಂಡ ಶ್ರೀಲಂಕಾ ವನ್ನು ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಮಣಿಸಿದರೆ, ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿತ್ತು. ಏಕೈಕ ಟ್ವೆಂಟಿ-20 ಪಂದ್ಯವನ್ನು ಗೆದ್ದುಕೊಂಡಿತ್ತು.

ಶ್ರೀ ಲಂಕಾ ತಂಡ

ದಿನೇಶ್ ಚಾಂಡಿಮಾಲ್(ನಾಯಕ), ಡಿ.ಕರುಣರತ್ನೆ, ಸಂದೀರ ಸಮರವಿಕ್ರಮ, ಲಹಿರು ತಿರಿಮನ್ನೆ(ಉಪ ನಾಯಕ), ನಿರೊಶನ್ ಡಿಕ್ವೆಲ್ಲಾ(ವಿಕೆಟ್‌ಕೀಪರ್), ದಿಲ್‌ರುವಾನ್ ಪೆರೇರ, ರಂಗನ ಹೆರಾತ್, ಸುರಂಗ ಲಕ್ಮಲ್, ಲಹಿರು ಗಾಮಗೆ, ಧನಂಜಯ ಡಿ’ ಸಿಲ್ವಾ, ಆ್ಯಂಜೆಲೊ ಮ್ಯಾಥ್ಯೂಸ್, ಲಕ್ಷಣ್ ಸಡಕನ್, ವಿಶ್ವ ಫೆರ್ನಾಂಡೊ, ದಸುನ್ ಶನಕ ಹಾಗೂ ರೊಶನ್ ಸಿಲ್ವಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News