ಬಂಟ್ವಾಳ : ಎನ್‍ಎಸ್‍ಯುಐ ವತಿಯಿಂದ 'ಮಾದಕ ದ್ರವ್ಯ ವಿರೋಧಿ ಅಭಿಯಾನ' ಕಾರ್ಯಕ್ರಮ

Update: 2017-11-09 11:54 GMT

ಬಂಟ್ವಾಳ, ನ. 9: ದ.ಕ. ಜಿಲ್ಲಾ ಎನ್‍ಎಸ್‍ಯುಐ ವತಿಯಿಂದ 'ಮಾದಕ ದ್ರವ್ಯ ವಿರೋಧಿ ಅಭಿಯಾನ' ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಮೊಡಂಕಪು ಕಾಲೇಜಿನ ಸಭಾಂಗಣನಡೆಯಿತು.

ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಎಚ್ಚರ ವಹಿಸುವ ಮೂಲಕ ತಮ್ಮ ಮಕ್ಕಳ ಚಟುವಟಿಕೆಗಳತ್ತ ಗಮನಹರಿಸಬೇಕು ಎಂದ ಅವರು, ಮಾದಕ ವಸ್ತುಗಳ ದುಶ್ಪಾರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ  ಸಾಲಿಯಾನ್,  ಕಾಲೇಜಿನ ಪ್ರಾಂಶುಪಾಲೇ ನವೀನಾ ಎನ್.ಸಿ, ಬಂಟ್ವಾಳ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಅಬ್ದುಲ್ಲ ಬಿನ್ನು, ರಾಜ್ಯ ಕಾರ್ಯದರ್ಶಿಯಾದ ರೂಪೇಶ್ ರೈ, ಫಾರೂಕ್.ಬಿ, ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಅಬ್ದುಲ್ ರೆಹಮಾನ್ ಔಫ್, ಎನ್‍ಎಸ್‍ಯುಐ ಬಂಟ್ವಾಳ ಘಟಕದ ಅಧ್ಯಕ್ಷ ರುಸೈದ್, ಉಪಾಧ್ಯಕ್ಷ ಸುದರ್ಶನ್ ಸಾಲ್ಯಾನ್, ಶಾರೂಕ್, , ಸವಾದ್ ಸುಳ್ಯ, ವಿನಯ್ ಕುಮಾರ್,ಸಚಿನ್ ಕುಮಾರ್, ಶ್ರವನ್ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಎನ್‍ಎಸ್‍ಯುಐ ವತಿಯಿಂದ ತಾಲೂಕಿನಾದ್ಯಂತ 20 ದಿನಗಳ ಕಾಲ "ಮಾದಕ ದ್ರವ್ಯ ವಿರೋಧಿ ಅಭಿಯಾನ" ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News