ಆರೆಸ್ಸೆಸ್ ಕಾರ್ಯಕರ್ತನ ಮನೆಯಲ್ಲಿ ಬಾಂಬ್ ಸ್ಫೋಟ
Update: 2017-11-09 20:51 IST
ಕಣ್ಣೂರು, ನ.9: ಕಣ್ಣೂರಿನ ಕೂತುಪರಂಬ ಪ್ರದೇಶದಲ್ಲಿರುವ ಆರೆಸ್ಸೆಸ್ ಕಾರ್ಯಕರ್ತನ ಮನೆಯಲ್ಲಿ ಬಾಂಬ್ ಸ್ಫೋಟಗೊಂಡು ಮನೆಗೆ ಆಂಶಿಕ ಹಾನಿಯಾಗಿದೆ. ಆರೆಸ್ಸೆಸ್ ಕಾರ್ಯಕರ್ತ ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತ ವಲಯಂಗದನ್ ರಘು ಎಂಬಾತನ ಮನೆಯ ಕೋಣೆಯೊಂದರಲ್ಲಿ ಸ್ಪೋಟ ಸಂಭವಿಸಿದೆ. ಘಟನಾಸ್ಥಳಕ್ಕೆ ತೆರಳಿದ ಪೊಲೀಸರು ಕೋಣೆಯಲ್ಲಿ ಅರ್ಧ ಕಿ.ಗ್ರಾಂ.ನಷ್ಟು ಗನ್‌ಪೌಡರ್ ಪತ್ತೆಹಚ್ಚಿದ್ದಾರೆ. ಸ್ಫೋಟ ನಡೆದ ತಕ್ಷಣ ರಘು ಮತ್ತಾತನ ಪುತ್ರ ನಾಪತ್ತೆಯಾಗಿದ್ದಾರೆ. ಬಾಂಬ್ ತಯಾರಿ ಸಂದರ್ಭ ಸ್ಫೋಟ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಇದೇ ಪರಿಸರದ ಕೊಟ್ಟಾಯಂಪೊಯಿಲ್ ಬಳಿ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಬಿಜೆಪಿ ಕಾರ್ಯಕರ್ತ ಮೃತಪಟ್ಟಿದ್ದ. ಈತ ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದ ಎನ್ನಲಾಗಿದೆ.