ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಶೇ.74ರಷ್ಟು ಮತದಾನ

Update: 2017-11-09 15:24 GMT

ಶಿಮ್ಲಾ,ನ.9: 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ಶೇ.74ರಷ್ಟು ಮತದಾನವಾಗಿದೆ ಎಂದು ಉಪ ಚುನಾವಣಾ ಆಯುಕ್ತ ದೀಪಕ ಸಕ್ಸೇನಾ ಅವರು ಗುರುವಾರ ಇಲ್ಲಿ ತಿಳಿಸಿದರು.

ಇದು ರಾಜ್ಯದಲ್ಲಿ ಈವರೆಗಿನ ದಾಖಲೆ ಪ್ರಮಾಣದ ಮತದಾನವಾಗಿದೆ. ಈ ಹಿಂದೆ 2012ರ ವಿಧಾನಸಭಾ ಚುನಾವಣೆಯಲ್ಲಿ ಶೇ.73.51ರಷ್ಟು ಮತದಾನವಾಗಿತ್ತು ಎಂದರು.

 ಗುರುವಾರ ನಡೆದ ಮತದಾನವು ಶಾಂತಿಯುತವಾಗಿತ್ತು. ಹಲವಾರು ಕಡೆಗಳಲ್ಲಿ ಮತದಾನ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸದ ಬಗ್ಗೆ ವರದಿಗಳು ಬಂದಿವೆ, ಆದರೆ ತಾಂತ್ರಿಕ ದೋಷಗಳಿಂದ ಎಲ್ಲಿಯೂ ಮತದಾನ ವಿಳಂಬಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಮುಖ್ಯಮಂತ್ರಿ ವೀರಭದ್ರ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಪ್ರೇಮಕುಮಾರ ಧುಮಾಲ್ ಅವರು ಅನುಕ್ರಮವಾಗಿ ರಾಮಪುರ ಮತ್ತು ಸಮೀರಪುರ ಕ್ಷೇತ್ರಗಳಿಂದ ತಮ್ಮ ಮತಗಳನ್ನು ಚಲಾಯಿಸಿದರು. ಭಾರತದ ಮೊದಲ ಮತದಾರ ಶ್ಯಾಮಶರಣ ನೇಗಿ(101) ಅವರು ವಿಧಾನಸಭಾ ಚುನಾವಣೆಯಲ್ಲಿ 15ನೇ ಬಾರಿ ಕಿನ್ನಾವುರ್ ಜಿಲ್ಲೆಯ ಕಲ್ಪಾದಲ್ಲಿ ಮತವನ್ನು ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News