×
Ad

ಚೀನಾ, ಹಾಂಕಾಂಗ್ ಓಪನ್ ನಿಂದ ಜಯರಾಮ್ ಔಟ್

Update: 2017-11-09 23:52 IST

ಹೊಸದಿಲ್ಲಿ, ನ.9: ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಮ್ ಮುಂದಿನ ತಿಂಗಳು ಚೀನಾ ಹಾಗೂ ಹಾಂಕಾಂಗ್‌ನಲ್ಲಿ ನಡೆಯಲಿರುವ ಎರಡು ಸೂಪರ್ ಸರಣಿ ಟೂರ್ನಮೆಂಟ್‌ಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

‘‘ಕಳೆದ ಕೆಲವು ತಿಂಗಳಿಂದ ಕಠಿಣ ಸಮಯ ಎದುರಿಸುತ್ತಿದ್ದೇನೆ. ಮಂಡಿನೋವಿನಿಂದಾಗಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡಲು ಸಾಧ್ಯವಾಗಿಲ್ಲ. ನಾನು ಈಗಾಗಲೇ ಕೊರಿಯಾ, ಜಪಾನ್, ಡೆನ್ಮಾರ್ಕ್ ಹಾಗೂ ಫ್ರಾನ್ಸ್‌ನಲ್ಲಿ ನಡೆದಿರುವ ಸೂಪರ್ ಸರಣಿಯಿಂದ ಹೊರಗುಳಿದಿದ್ದೇನೆ’’ ಎಂದು ಜಯರಾಮ್ ಹೇಳಿದ್ದಾರೆ. 2015ರ ಕೊರಿಯಾ ಸೂಪರ್ ಸರಣಿಯಲ್ಲಿ ಫೈನಲ್‌ಗೆ ತಲುಪಿರುವ ಜಯರಾಮ್ ಎರಡು ಬಾರಿ ಡಚ್ ಓಪನ್ ಪ್ರಶಸ್ತಿ ಜಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News