ನಾಡಾ ಸಮಿತಿಯ ಸದಸ್ಯನಾಗಿ ವೀರೇಂದ್ರ ಸೆಹ್ವಾಗ್

Update: 2017-11-09 18:26 GMT

ಹೊಸದಿಲ್ಲಿ, ನ.9: ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ದಿಲ್ಲಿಯ ಮಾಜಿ ಆಟಗಾರ ವಿನಯ್ ಲಾಂಬಾ ನಾಡಾದ ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅತ್ಯಂತ ಅಪರೂಪದ ಸನ್ನಿವೇಶದಲ್ಲಿ ಇಬ್ಬರು ಕ್ರಿಕೆಟಿಗರನ್ನು ನಾಡಾ ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಸೆಹ್ವಾಗ್ ಹಾಗೂ ಲಾಂಬಾ ನಿವೃತ್ತ ನ್ಯಾಯಾಧೀಶ ಆರ್.ವಿ. ಈಶ್ವರ್ ನೇತೃತ್ವದ ಆರು ಸದಸ್ಯರ ಸಮಿತಿಯಲ್ಲಿ ಸ್ಥಾನಪಡೆದಿದ್ದಾರೆ.

ಸಮಿತಿಯಲ್ಲಿ ವಿಭಾ ದತ್ತ, ಡಾ.ನವೀನ್ ಡಾಂಗ್ ಹಾಗೂ ಹರೀಶ್ ಮಹಾಜನ್‌ರಿದ್ದಾರೆ. ನಾಡಾ ಸಮಿತಿ ಇಂದು ಎರಡು ಗಂಟೆಗಳ ಕಾಲ ಸಭೆ ನಡೆಸಿತ್ತು. ಆದರೆ ಸಭೆಗೆ ಸೆಹ್ವಾಗ್ ಹಾಜರಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News