ಮುಷ್ಕರ ನಿರತ ವೈದ್ಯರಿಗೆ ಹಾಲು ಪೂರೈಸದಿರಲು ಹೈನುಗಾರರ ನಿರ್ಧಾರ

Update: 2017-11-10 15:00 GMT

ಕೋಟಾ(ರಾಜಸ್ಥಾನ),ನ.10: ತಮ್ಮ 33 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿಯ ಸುಮಾರು 640 ವೈದ್ಯರು ನ.6ರಿಂದ ನಡೆಸುತ್ತಿರುವ ಮುಷ್ಕರದಿಂದಾಗಿ ಆರೋಗ್ಯ ರಕ್ಷಣೆ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದರಿಂದ ಕ್ರುದ್ಧರಾಗಿರುವ ಹೈನುಗಾರರು ಅವರಿಗೆ ಹಾಲು ಪೂರೈಕೆಯನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.

ಒಕ್ಕೂಟದ ಭಾಗವಾಗಿರುವ ಕೋಟಾದ 300ಕ್ಕೂ ಅಧಿಕ ಖಾಸಗಿ ಡೇರಿಗಳು ರಾಜ್ಯವ್ಯಾಪಿ ಮುಷ್ಕರದಲ್ಲಿ ಭಾಗಿಯಾಗಿರುವ ಇಲ್ಲಿಯ ವೈದ್ಯರ ಮನೆಗಳಿಗೆ ಹಾಲು ಪೂರೈಕೆಯನ್ನು ನಿಲ್ಲಿಸಲಿವೆ ಎಂದು ಕೋಟಾ ಖಾಸಗಿ ಡೇರಿ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಉಮರ್ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಬಡಜನತೆಗೆ ಸರಕಾರಿ ಆಸ್ಪತ್ರೆಗಳೇ ಆಸರೆಯಾಗಿವೆ. ಹೀಗಾಗಿ ಸಾಂಕ್ರಾಮಿಕ ಕಾಯಿಲೆಗಳು ತೀವ್ರವಾಗಿರುವ ಈ ಸಂದರ್ಭದಲ್ಲಿ ವೈದ್ಯರ ಮುಷ್ಕರವು ಅನೈತಿಕವಾಗಿದೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News