ಡಿಡಿಸಿಎ ಆಡಳಿತ ಸಮಿತಿಗೆ ಗಂಭೀರ್

Update: 2017-11-10 18:25 GMT

ಹೊಸದಿಲ್ಲಿ, ನ.10: ಟೆಸ್ಟ್ ಕ್ರಿಕೆಟ್‌ನ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್‌ರನ್ನು ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆಯ(ಡಿಡಿಸಿಎ)ಆಡಳಿತ ಸಮಿತಿಗೆ ಕೇಂದ್ರ ಸರಕಾರ ಶುಕ್ರವಾರ ನಾಮ ನಿರ್ದೇಶನಗೊಳಿಸಿದೆ.

ದಿಲ್ಲಿಯ ಎಡಗೈ ದಾಂಡಿಗ ಗಂಭೀರ್ ಕೇಂದ್ರ ಕ್ರೀಡಾಸಚಿವ ರಾಜ್ಯವರ್ಧನ್ ಸಿಂಗ್‌ಗೆ ಟ್ವಿಟರ್‌ನ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

‘‘ಡಿಡಿಸಿಎ ಕಾರಿಡಾರ್‌ನಲ್ಲಿ ಹೊಂದಿಕೊಳ್ಳಲು ಹಾಗೂ ಸಂಸ್ಥೆಯ ಗತವೈಭವವನ್ನು ಮರುಸ್ಥಾಪಿಸಲು ಇನ್ನಷ್ಟು ಸಮಯಾವಕಾಶದ ಅಗತ್ಯವಿದೆ. ಡಿಡಿಸಿಎ ಆಡಳಿತ ಸಮಿತಿಗೆ ಸರಕಾರದಿಂದ ನಾಮನಿರ್ದೇಶನಗೊಂಡಿದ್ದು ನನ್ನ ಪಾಲಿಗೆ ಗೌರವದ ವಿಷಯ. ಇದಕ್ಕಾಗಿ ಸಚಿವರಾದ ರಾಥೋರ್‌ಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. 36ರ ಹರೆಯದ ಗಂಭೀರ್ 58 ಟೆಸ್ಟ್, 147 ಏಕದಿನ ಹಾಗೂ 37 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಎರಡು ವಿಶ್ವಕಪ್‌ಗಳಲ್ಲಿ(2007ರ ಟ್ವೆಂಟಿ-20)ಹಾಗೂ 2011-12ರ ಏಕದಿನ ವಿಶ್ವಕಪ್)ಭಾರತದ ಪರ ಗರಿಷ್ಠ ಸ್ಕೋರ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News