ಮೊರಾಕ್ಕೊ,ಟುನಿಶಿಯಾ ಫಿಫಾ ವಿಶ್ವಕಪ್‌ಗೆ ತೇರ್ಗಡೆ

Update: 2017-11-12 17:04 GMT

ಜೊಹಾನ್ಸ್‌ಬರ್ಗ್, ನ.12: ಉತ್ತರ ಆಫ್ರಿಕದ ದೇಶಗಳಾಗಿರುವ ಟುನಿಶಿಯಾ ಮತ್ತು ಮೊರಾಕ್ಕೊ ರಷ್ಯಾದಲ್ಲಿ 2018ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿದೆ.

ಮೊರಾಕ್ಕೊ ತಂಡ ಸ’ಗುಂಪಿನಲ್ಲಿ ಐವರಿ ಕೋಸ್ಟ್ ತಂಡವನ್ನು 2-0 ಅಂತರದಲ್ಲಿ ಮಣಿಸಿ ವಿಶ್ವಕಪ್‌ಗೆ ಅರ್ಹತೆ ಪಡೆಯಿತು.

ಟ್ಯುನಿಶಿಯಾ ಮತ್ತು ಲಿಬಿಯಾ ತಂಡಗಳ ವಿಶ್ವಕಪ್‌ನ ಪ್ಲೇ ಆಫ್ ಪಂದ್ಯ ಗೋಲುರಹಿತವಾಗಿ ಡ್ರಾಗೊಂಡಿದ್ದರೂ ಟುನಿಶಿಯಾ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಂಡಿತು.

  ಮೊರಾಕ್ಕೊ ತಂಡ 16 ಪಂದ್ಯಗಳಲ್ಲಿ 12 ಪಾಯಿಂಟ್ಸ್ ಸಂಪಾದಿಸಿ 1998ರ ಬಳಿಕ ಮೊದಲ ಬಾರಿ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿದೆ. ಮೊರಾಕ್ಕೊ ತಂಡದ ನಬಿಲ್ ದಿರಾರ್ ಮತ್ತು ಮೆಧಿ ಬೆನಾಟಿಯಾ ಗೋಲು ದಾಖಲಿಸಿ ಮೊರಕ್ಕೊ ತಂಡವನ್ನು ಗೆಲುವಿನ ದಡ ಸೇರಿಸಿದರು.

 ಟುನಿಶಿಯಾ 14 ಪಾಯಿಂಟ್ಸ್ ಸಂಗ್ರಹಿಸಿ 2006ರ ಬಳಿಕ ಮೊದಲ ಬಾರಿ ವಿಶ್ವಕಪ್‌ಗೆ ತೇರ್ಗಡೆಯಾಗಿದೆ.

ಆಫ್ರಿಕಾದ ಇತರ ದೇಶಗಳಾದ ಸೆನೆಗಲ್ ಶುಕ್ರವಾರ ತೇರ್ಗಡೆಯಾಗಿತ್ತು. ನೈಜೀರಿಯಾ ಮತ್ತು ಈಜಿಪ್ಟ್ ಕಳೆದ ತಿಂಗಳು ಅವಕಾಶ ಗಿಟ್ಟಿಸಿಕೊಂಡಿತ್ತು.ಆಫ್ರಿಕದಿಂದ ಒಟ್ಟು 5 ತಂಡಗಳು ತೇರ್ಗಡೆಯಾಗಿವೆ.

►ಹಿಂಸಾಚಾರಕ್ಕೆ ತಿರುಗಿದ ವಿಜಯೋತ್ಸವ: ಮೊರಾಕ್ಕೊ ಫುಟ್ಬಾಲ್ ತಂಡ ರಷ್ಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ತೇರ್ಗಡೆಯಾದ ಬೆನ್ನಲ್ಲೇ ಕೇಂದ್ರ ಬ್ರಸೆಲ್ಸ್‌ನಲ್ಲಿ ನಡೆದ ವಿಜಯೋತ್ಸವವು ಹಿಂಸಾಚಾರಕ್ಕೆ ತಿರುಗಿದ್ದು,ಹಿಂಸಾಚಾರದಲ್ಲಿ ಕಾರೊಂದು ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News