‘ಪ್ರಥಮ ಟೆಸ್ಟ್ ಗೆಲ್ಲುವುದು ಮೊದಲ ಗುರಿ’: ಸಹಾ

Update: 2017-11-13 18:19 GMT

ಕೊಲ್ಕತಾ, ನ.13: ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಮೂರು ಪಂದ್ಯಗಳ ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಗೆಲ್ಲುವುದು ತಂಡದ ಪ್ರಮುಖ ಗುರಿ ಎಂದು ಭಾರತದ ಟೆಸ್ಟ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನ.16ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ಗೆ ಸೋಮವಾರ ಅಭ್ಯಾಸ ನಡೆಸಿದ ಬಳಿಕ ಸಹಾ ಸುದ್ದಿಗಾರರೊಂದಿಗೆ ಮಾತನಾಡಿದರು. ‘‘ಪ್ರತಿಯೊಂದು ಪಂದ್ಯವೂ ಅತ್ಯಂತ ಮುಖ್ಯವಾದುದು ಮತ್ತು ವಿಭಿನ್ನ ಸವಾಲಿನಿಂದ ಕೂಡಿರುತ್ತದೆ. ತಯಾರಿಯ ರೀತಿಯೂ ಒಂದೇ ರೀತಿ ಇರುವುದಿಲ್ಲ. ನಾವು ಇಲ್ಲಿ ಚೆನ್ನಾಗಿ ಅಡಿದ ಬಳಿಕವಷ್ಟೇ ದಕ್ಷಿಣ ಆಫ್ರಿಕ ವಿರುದ್ಧದ ಸರಣಿಗೆ ತಯಾರಿಗೆ ಆಲೋಚನೆ ಮಾಡುತ್ತೇವೆ’’ ಎಂದು ಹೇಳಿದರು. ‘‘ಭಾರತ ಮೂರು ಸ್ಪಿನ್ನರ್‌ಗಳನ್ನು ಮೊದಲ ಟೆಸ್ಟ್ ನಲ್ಲಿ ಕಣಕ್ಕಿಳಿಸಲಿದೆ. ಸ್ಪಿನ್ನರ್ ಅಶ್ವಿನ್, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮತ್ತು ಎಡಗೈ ಚೈನಾಮನ್ ಕುಲದೀಪ್ ಯಾದವ್ ಎಲ್ಲರ ಬೌಲಿಂಗ್ ವಿಭಿನ್ನವಾಗಿರುತ್ತದೆ. ವೇಗದ ಬೌಲರ್‌ಗಳಾದ ಇಶಾಂತ್ ಶರ್ಮಾ ಮತ್ತು ಮುಹಮ್ಮದ್ ಶಮಿ ಅವರಿಗೆ ದೊಡ್ಡ ಸವಾಲು ಎದುರಾಗಿದೆ’’ ಎಂದು ಸಹಾ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News