ಕೊಂಡಾಡಿ ಗಿರಿಜನ ಕಾಲನಿ ನಿವೇಶನದಾರರ ಸಂಘ ಅಸ್ತಿತ್ವಕ್ಕೆ

Update: 2017-11-14 16:10 GMT

ಉಡುಪಿ, ನ.14: ನಿವೇಶನಗಳ ಹಕ್ಕುಪತ್ರ ದೊರೆತರೂ ಜಾಗ ಸಿಗದೆ ನೊಂದಿರುವ 23 ಕೊರಗ ಕುಟುಂಬಗಳನ್ನೊಳಗೊಂಡ ನೂತನ ಕೊಂಡಾಡಿ ಗಿರಿಜನ ಕಾಲನಿ ನಿವೇಶನದಾರರ ಸಂಘವನ್ನು ರಚಿಸಲಾಗಿದ್ದು, ಇಂದು ಅದರ ಉದ್ಘಾಟನಾ ಕಾರ್ಯಕ್ರಮವು ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮನೋತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ಭೂಮಿಯನ್ನು ನೀಡಿ ಅದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವುದು ಸರಕಾರ ಕರ್ತವ್ಯವಾಗಿದೆ. ನಮ್ಮ ಹಕ್ಕನ್ನು ಪಡೆದುಕೊಳ್ಳಲು ನಾವು ಹೋರಾಟ ನಡೆಸಬೇಕಾಗಿದೆ. ಈ ಹೋರಾಟದಲ್ಲಿ ಮುಖ್ಯವಾಗಿ ಬದ್ಧತೆ ಇರಬೇಕು. ಇದರಿಂದ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶ್ಯಾನುಭಾಗ್ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಮಣಿಪಾಲ ವಿವಿಯ ಸ್ವಯಂಸೇವಕರು ನಮ್ಮಾಂದಿಗೆ ಕೈಜೋಡಿಸಿರುವುದರಿಂದ ಕೊಂಡಾಡಿ ಯ ಎರಡೂವರೆ ಎಕರೆ ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಹೀಗಾಗಿ ಸರಕಾರ ಇನ್ನು 15ದಿನಗೊಳಗೆ ಗಡಿ ಗುರುತಿಸಿಕೊಡಬೇಕು. ಜ.1ರೊಳಗೆ ಸರಕಾರ ಈ ಕಾಲೋನಿಗೆ ನೀರು, ರಸ್ತೆ, ವಿದ್ಯುತ್ ಒದಗಿಸಬೇಕು. ಮುಂದಿನ ಮಳೆಗಾಲಕ್ಕೆ ಮೊದಲು ಈ ಎಲ್ಲ ಕುಟುಂಬಗಳು ಅಲ್ಲಿ ಮನೆ ನಿರ್ಮಿಸಿ ವಾಸ ಮಾಡುವಂತಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪರಿಸರ ಹೋರಾಟಗಾರ ಶಶಿಧರ್ ಶೆಟ್ಟಿ, ನಿವೃತ್ತ ತಹಶೀಲ್ದಾರ ಮುರಳೀಧರ್, ಸಂಘದ ಸಂಚಾಲಕರಾದ ಸುಬೇದ ಅಂಬಾ ಗಿಲು ಮತ್ತು ಮಹಾಲಕ್ಷ್ಮೀ ಅಂಬಾಗಿಲು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News