ಸರಕಾರಿ ಭೂ ಕಬಳಿಕೆ; ಸಚಿವ ರೈ ವಿರುದ್ಧ ಲೋಕಾಯುಕ್ತ, ಎಸಿಬಿಗೆ ದೂರು: ಹರಿಕೃಷ್ಣ ಬಂಟ್ವಾಳ್

Update: 2017-11-15 07:39 GMT

ಮಂಗಳೂರು, ನ.15: ರಾಜ್ಯ ಅರಣ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ.ರಮಾನಾಥ ರೈಯವರು ಕಳ್ಳಿಗೆಯಲ್ಲಿ ಸರಕಾರಿ ಜಾಗವನ್ನು ಕಬಳಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಲು ತೀರ್ಮಾನಿಸಿರುವುದಾಗಿ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಸರ್ವೇ ನಂ.97/1ರಲ್ಲಿರುವ 28 ಎಕರೆ ಸರಕಾರಿ ಜಾಗದಲ್ಲಿ 10 ಎಕರೆಯನ್ನು ರಮಾನಾಥ ರೈಯವರು ಕಬಳಿಸಿ ರಬ್ಬರ್ ಗಿಡಗಳನ್ನು ಬೆಳೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ತನಿಖೆ ನಡೆಸಬೇಕು. ಅಲ್ಲದೇ ಇಂತಹ ಅಕ್ರಮ ಎಸಗಿದ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ಭೂ ಕಬಳಿಕೆ ವಿಚಾರವಾಗಿ ನ.17ರಂದು ಜಿಲ್ಲೆಗೆ ಆಗಮಿಸುವ ರಾಜ್ಯ ಲೋಕಾಯುಕ್ತರಿಗೆ ದೂರು ನೀಡುತ್ತೇನೆ. ಎಸಿಬಿಗೂ ಈ ಬಗ್ಗೆ ದೂರು ನೀಡುವುದಾಗಿ ಅವರು ತಿಳಿಸಿದರು.

ಅಕ್ರಮ ಭೂ ಕಬಳಿಕೆ ಬಗ್ಗೆ ನಾನು ರಮಾನಾಥ ರೈ ವಿರುದ್ಧ ತಾನು ಮಾಡಿರುವ ಆರೋಪಕ್ಕೆ ಸಂಬಂಧಿಸಿ ಅವರು ಎಸ್ಕೇಪಿಂಗ್ ಉತ್ತರ ನೀಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News