×
Ad

ಅಯೋಧ್ಯೆ ವಿವಾದ: ಸುಪ್ರೀಂ ಕೋರ್ಟ್ ಮಾತೇ ಅಂತಿಮ; ರಾಮ್ ನಾಯಕ್

Update: 2017-11-15 21:37 IST

ಹೊಸದಿಲ್ಲಿ, ನ. 15: ಜಟಿಲ ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ನ ಮಾತೇ ಅಂತಿಮ ಎಂದು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ಬುಧವಾರ ಹೇಳಿದ್ದಾರೆ.

ಆಧ್ಯಾತ್ಮಿಕ ಗುರು, ಆರ್ಟ್ ಆಫ್ ಲೀವಿಂಗ್‌ನ ಸ್ಥಾಪಕ ಶ್ರೀ ರವಿಶಂಕರ್ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಭೆ ಕುರಿತು ರಾಮ್ ನಾಯಕ್ ಈ ಪ್ರತಿಕ್ರಿಯೆ ನೀಡಿದ್ದಾರೆ.

 ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ತಾನು ಮಧ್ಯಸ್ಥಿಕೆ ವಹಿಸಲಿದ್ದೇನೆ ಹಾಗೂ ಎಲ್ಲ ಪಾಲುದಾರರನ್ನು ಭೇಟಿಯಾಗಲಿದ್ದೇನೆ ಎಂದು ರವಿಶಂಕರ್ ಹೇಳಿದ್ದರು.

ರಾಮ ಮಂದಿರ ವಿಷಯ ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ಸಂಬಂಧಿತ ಪಾಲುದಾರರು ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಯತ್ನಿಸಿದರೆ ಉತ್ತಮ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು ಎಂದು ರಾಮ್ ನಾಯಕ್ ತಿಳಿಸಿದರು.

ಮಧ್ಯಸ್ತಿಕೆ ಶ್ರಮ ಯಶಸ್ವಿಯಾಗಲಿ ಎಂದು ರಾಮ್ ನಾಯಕ್ ಹಾರೈಸಿದ್ದಾರೆ.

ಇವರ ಶ್ರಮದಲ್ಲೇ ಈ ವಿವಾದ ಪರಿಹಾರವಾಗಬೇಕು ಎಂದು ಕೆಲವರು ಬಯಸುತ್ತಿದ್ದಾರೆ. ಅವರು ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ. ಆದರೆ, ಅಂತಿಮ ಮಾತನ್ನು ಸುಪ್ರೀಂ ಕೋರ್ಟ್ ಹೇಳಬೇಕು. ಪ್ರತಿಯೊಬ್ಬರೂ ಅದನ್ನು ಸ್ವೀಕರಿಸಬೇಕು ಎಂಬುದು ನನ್ನ ಭಾವನೆ.

ರಾಮ್ ನಾಯಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News