×
Ad

ಸಲಿಂಗ ವಿವಾಹದ ಪರವಾಗಿ ಮತ ಚಲಾಯಿಸಿದ ಆಸ್ಟ್ರೇಲಿಯ

Update: 2017-11-15 22:18 IST

ಸಿಡ್ನಿ (ಆಸ್ಟ್ರೇಲಿಯ), ನ. 15: ಆಸ್ಟ್ರೇಲಿಯನ್ನರು ಬುಧವಾರ ಸಲಿಂಗ ವಿವಾಹದ ಪರವಾಗಿ ಭಾರೀ ಬಹುಮತದೊಂದಿಗೆ ಮತ ಚಲಾಯಿಸಿದ್ದಾರೆ. ಇದರೊಂದಿಗೆ, 2017ರ ಅಂತ್ಯದ ವೇಳೆಗೆ ಇದಕ್ಕೆ ಸಂಬಂಧಿಸಿದ ಕಾನೂನು ರೂಪುಗೊಳ್ಳಲು ವೇದಿಕೆ ಸಿದ್ಧವಾಗಿದೆ.

ಜನಮತಗಣನೆಯ ಫಲಿತಾಂಶವನ್ನು ಜನರು ಮದುವೆ ದಿರಿಸುಗಳನ್ನು ಧರಿಸುವ ಮೂಲಕ ಆಚರಿಸಿದರು.

ಆಸ್ಟ್ರೇಲಿಯ ಸಂಸತ್ತು ಈ ಕುರಿತ ಮಸೂದೆಯನ್ನು ಅಂಗೀಕರಿಸಿದರೆ, ಸಲಿಂಗ ವಿವಾಹವನ್ನು ಊರ್ಜಿತಗೊಳಿಸಿದ 26ನೆ ದೇಶವಾಗಲಿದೆ. ಸರಕಾರದೊಳಗೇ ಇರುವ ಸಂಪ್ರದಾಯವಾದಿ ಬಲಪಂಥೀಯರ ವಿರೋಧದ ಹೊರತಾಗಿಯೂ, ಮಸೂದೆಯು ಈ ವರ್ಷದ ಅಂತ್ಯದೊಳಗೆ ಜಾರಿಗೆ ಬರುವುದು ಖಚಿತವಾಗಿದೆ.

61.6 ಶೇಕಡ ಮತದಾರರು ಸಲಿಂಗ ವಿವಾಹದ ಪರವಾಗಿ ಮತ ಚಲಾಯಿಸಿದ್ದಾರೆ ಹಾಗೂ 38.4 ಶೇ. ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂದು ಆಸ್ಟ್ರೇಲಿಯದ ಮುಖ್ಯ ಸಂಖ್ಯಾಶಾಸ್ತ್ರಜ್ಞರು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News