ಸುರಂಗ ಲಕ್ಮಲ್ ಕಮಾಲ್
ಕೋಲ್ಕತಾ, ನ.16: ಶ್ರೀಲಂಕಾ ವಿರುದ್ಧ ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ಗುರುವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದ್ದು, ಪಂದ್ಯದಲ್ಲಿ ಟೀಮ್ ಇಂಡಿಯಾ ಅಗ್ರ ಸರದಿಯ ದಾಂಡಿಗರನ್ನು ಬೇಗನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮಳೆಯಿಂದಾಗಿ ಆಟ ನಿಂತಾಗ ಭಾರತ 11.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 17 ರನ್ ಗಳಿಸಿದೆ. ಚೇತೇಶ್ವರ ಪೂಜಾರ ಔಟಾಗದೆ 8 ರನ್ ಮತ್ತು ಇನ್ನೂ ಖಾತೆ ತೆರೆಯದ ಅಜಿಂಕ್ಯ ರಹಾನೆ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಮಳೆಯಿಂದಾಗಿ ತಡವಾಗಿ ಆಟ ಆರಂಭಗೊಂಡಿತ್ತು. ಟಾಸ್ ಜಯಿಸಿದ್ದ ಶ್ರೀಲಂಕಾ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಎರಡು ಬಾರಿ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿತ್ತು. ದಿನದ ಓವರ್‌ನ ಮೊದಲ ಎಸೆತದಲ್ಲಿ ಲೋಕೇಶ್ ರಾಹುಲ್ ಅವರು ಸುರಂಗ ಲಕ್ಮಲ್‌ಗೆ ವಿಕೆಟ್ ಒಪ್ಪಿಸಿದರು ರಾಹುಲ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಬಳಿಕ ಚೇತೇಶ್ವರ ಪೂಜಾರ ಕ್ರೀಸ್‌ಗೆ ಆಗಮಿಸಿದರು. ತಂಡದ ಸ್ಕೋರ್ 6.2ನೆ ಓವರ್‌ನಲ್ಲಿ 13ಕ್ಕೆ ತಲುಪುವಾಗ ಶಿಖರ್ ಧವನ್ 8 ರನ್(11ಎ,1ಬೌ) ಗಳಿಸಿ ಸುರಂಗ ಲಕ್ಮಲ್ ಎಸೆತದಲ್ಲಿ ಔಟಾಗಿ ಪೆವಿಲಿಯನ್ ಸೇರಿದರು. ನಾಯಕ ವಿರಾಟ್ ಕೊಹ್ಲಿ 11 ಎಸೆತಗಳನ್ನು ಎದುರಿಸಿದ್ದರೂ ಅವರಿಗೆ ಖಾತೆ ತೆರೆಯಲು ಅವಕಾಶ ನೀಡದೆ ಸುರಂಗ ಲಕ್ಮಲ್ ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಲಕ್ಮಲ್ 6 ಓವರ್‌ಗಳಲ್ಲಿ ಒಂದೂ ರನ್ ನೀಡದೆ 3 ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡು ಅಪೂರ್ವ ಯಶಸ್ಸು ಗಳಿಸಿದರು.
ಸಂಕ್ಷಿಪ್ತ ಸ್ಕೋರ್
►ಭಾರತ 11.5 ಓವರ್‌ಗಳಲ್ಲಿ 17/3
ರಾಹುಲ್ ಸಿ ಡಿಕ್ವೆಲ್ಲಾ ಬಿ ಲಕ್ಮಲ್0
ಶಿಖರ್ ಧವನ್ ಬಿ ಲಕ್ಮಲ್ 8
ಪೂಜಾರ ಬ್ಯಾಟಿಂಗ್8
ವಿರಾಟ್ ಕೊಹ್ಲಿ ಎಲ್‌ಬಿಡಬ್ಲು ಲಕ್ಮಲ್0
ಅಜಿಂಕ್ಯ ರಹಾನೆ ಔಟಾಗದೆ 0
ಇತರೆ1
ವಿಕೆಟ್ ಪತನ: 1-0, 13-2, 17-3
ಬೌಲಿಂಗ್ ವಿವರ
ಸುರಂಗ ಲಕ್ಮಲ್06-06-00-03
ಲಹಿರು ಗಾಮಗೆ 5.5-01-16-00