2018ರ ಫಿಫಾ ವಿಶ್ವಕಪ್‌ನಲ್ಲಿರುವ ಕೆಳ ರ್ಯಾಂಕಿನ ತಂಡ ರಶ್ಯ

Update: 2017-11-16 18:20 GMT

ಮಾಸ್ಕೊ, ನ.16: 2018ರ ಫಿಫಾ ವಿಶ್ವಕಪ್‌ಗಾಗಿ ಮುಂದಿನ ತಿಂಗಳು ಡ್ರಾ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ ನಾಲ್ಕು ಶ್ರೇಯಾಂಕವನ್ನು ನಿಗದಿಪಡಿಸಲಾಗಿದೆ. ಈ ಪೈಕಿ ಆತಿಥೇಯ ರಶ್ಯ ಕೆಳ ರ್ಯಾಂಕಿನ (65)ತಂಡವಾಗಿದೆ. ಸೌದಿ ಅರೇಬಿಯಕ್ಕಿಂತ 2 ರ್ಯಾಂಕಿನಿಂದ ಹಿಂದಿದೆ.

  ಡಿ.1ರಂದು ನಡೆಯಲಿರುವ ಡ್ರಾ ಪ್ರಕ್ರಿಯೆಗೆ ಅಕ್ಟೋಬರ್‌ನ ಫಿಫಾ ರ್ಯಾಂಕಿಂಗ್‌ನ್ನು ಮಾನದಂಡವಾಗಿ ಬಳಸಲಾಗುತ್ತದೆ. ವಿಶ್ವದ ನಂ.65ನೆ ತಂಡವಾಗಿರುವ ರಶ್ಯ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ ಕೆಳ ರ್ಯಾಂಕಿನ ತಂಡವಾಗಿದೆ. ಆದರೆ, ರಶ್ಯ ರ್ಯಾಂಕಿಂಗ್‌ನಲ್ಲಿ ಕೆಳಗಿದ್ದರೂ ಆತಿಥೇಯ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಅಗ್ರ ಶ್ರೇಯಾಂಕದೊಂದಿಗೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

2018ರ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿವೆೆ. 10ನೇ ರ್ಯಾಂಕಿನಲ್ಲಿರುವ ಪೆರು ತಂಡ ಬುಧವಾರ ಲಿಮಾದಲ್ಲಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ 122ನೇ ರ್ಯಾಂಕಿನ ನ್ಯೂಝಿಲೆಂಡ್ ವಿರುದ್ಧ ಜಯ ಸಾಧಿಸಿ ಕೊನೆಯ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.

ರಶ್ಯ ತಂಡ ಜೂ.14 ರಂದು ಟೂರ್ನಮೆಂಟ್‌ನ ಮೊದಲ ಪಂದ್ಯವನ್ನು ಆಡಲಿದೆ. ವಿಶ್ವಕಪ್‌ನ ಫೈನಲ್ ಪಂದ್ಯ ಜು.15 ರಂದು ನಡೆಯಲಿದೆ.

ವಿಶ್ವಕಪ್ ಶ್ರೇಯಾಂಕಗಳು(ಅಕ್ಟೋಬರ್‌ನ ಫಿಫಾ ರ್ಯಾಂಕಿಂಗ್ ಆಧಾರದಲ್ಲಿ)

►ಶ್ರೇಯಾಂಕ 1: ರಶ್ಯ(65), ಜರ್ಮನಿ(1),ಬ್ರೆಝಿಲ್(2), ಪೋರ್ಚುಗಲ್(3),ಅರ್ಜೆಂಟೀನ(4),ಬೆಲ್ಜಿಯಂ(5),ಪೊಲೆಂಡ್(6), ಫ್ರಾನ್ಸ್(7).

►ಶ್ರೇಯಾಂಕ 2: ಸ್ಪೇನ್(8), ಪೆರು(10), ಸ್ವಿಟ್ಝರ್ಲೆಂಡ್(11), ಇಂಗ್ಲೆಂಡ್(12), ಕೊಲಂಬಿಯಾ(13),ಮೆಕ್ಸಿಕೊ(16), ಉರುಗ್ವೆ(17), ಕ್ರೊಯೇಷಿಯ(18).

►ಶ್ರೇಯಾಂಕ 3: ಡೆನ್ಮಾರ್ಕ್(19), ಐಸ್‌ಲ್ಯಾಂಡ್(21), ಕೋಸ್ಟರಿಕಾ(22),ಸ್ವೀಡನ್(25),ಟ್ಯುನಿಶಿಯ(28),ಈಜಿಪ್ಟ್(30), ಸೆನಗಲ್(32), ಇರಾನ್(34).

►ಶ್ರೇಯಾಂಕ 4: ಸರ್ಬಿಯ(38), ನೈಜೀರಿಯ(41), ಆಸ್ಟ್ರೇಲಿಯ(43), ಜಪಾನ್(44), ಮೊರೊಕ್ಕೊ(48),ಪನಾಮ(49), ದಕ್ಷಿಣ ಕೊರಿಯಾ(62), ಸೌದಿ ಅರೇಬಿಯ(63).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News