ಡಿ.1ಕ್ಕೆ ಬಿಸಿಸಿಐ ವಿಶೇಷ ಮಹಾಸಭೆ

Update: 2017-11-16 18:28 GMT

ಹೊಸದಿಲ್ಲಿ, ನ.16: ಬಿಸಿಸಿಐ ಡಿ.1 ರಂದು ವಿಶೇಷ ಮಹಾಸಭೆ(ಎಸ್‌ಜಿಎಂ) ನಡೆಸಲಿದ್ದು, 2019ರಿಂದ 2023ರ ತನಕದ ಭವಿಷ್ಯದ ಪ್ರವಾಸ ಕಾರ್ಯಕ್ರಮ(ಎಟಿಪಿ) ಸಹಿತ ಎಲ್ಲ ಮೂರು ಪ್ರಮುಖ ಕಾರ್ಯಸೂಚಿಯ ಬಗ್ಗೆ ಚರ್ಚಿಸಲಿದೆ. ಭಾರತ 2019ರ ಆದಿಯಲ್ಲಿ ನ್ಯೂಝಿಲೆಂಡ್‌ಗೆ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ. ಐದು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ ವಿರುದ್ಧ ಸರಣಿ ನಿಗದಿಯಾಗಲಿದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ. ಆಡಳಿತಾಧಿಕಾರಿ ಸಮಿತಿ(ಸಿಒಎ)ಸೂಚನೆಯ ಮೇರೆಗೆ ಬಿಸಿಸಿಐನ ಪ್ರಭಾರ ಅಧ್ಯಕ್ಷ ಸಿ.ಕೆ.ಖನ್ನಾ ವಿಶೇಷ ಮಹಾಸಭೆ ಕರೆದಿದ್ದಾರೆ. ಸಭೆಯಲ್ಲಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಹಿಂದೆಗೆದುಕೊಳ್ಳುವಿಕೆ ಹಾಗೂ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳ ಪ್ರತಿಪಾದಿಸುತ್ತಿರುವ 850 ಕೋ.ರೂ. ಪರಿಹಾರ ಹಕ್ಕಿನ ಬಗ್ಗೆಯೂ ಚರ್ಚೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News