ಫೆಡರರ್‌ಗೆ ಶಾಕ್ ನೀಡಿದ ಗಫಿನ್ ಫೈನಲ್‌ಗೆ

Update: 2017-11-18 18:12 GMT

ಲಂಡನ್, ನ.18: ಹಾಟ್ ಫೇವರಿಟ್ ಹಾಗೂ ಆರು ಬಾರಿಯ ಚಾಂಪಿಯನ್ ರೋಜರ್ ಫೆಡರರ್‌ರನ್ನು 2-6, 6-3, 6-4 ಸೆಟ್‌ಗಳ ಅಂತರದಿಂದ ಸೋಲಿಸಿರುವ ಬೆಲ್ಜಿಯಂನ ಡೇವಿಡ್ ಗಫಿನ್ ಎಟಿಪಿ ಫೈನಲ್ಸ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಈ ವರ್ಷ ಕೇವಲ 4 ಪಂದ್ಯಗಳಲ್ಲಿ ಸೋತಿರುವ ಫೆಡರರ್ ಮೊದಲ ಸೆಟ್‌ನ್ನು 6-2 ರಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಆದರೆ,7ನೆ ಶ್ರೇಯಾಂಕದ ಗಫಿನ್ 2ನೆ ಸೆಟ್‌ನ ಆರಂಭದಲ್ಲಿ ಮೇಲುಗೈ ಸಾಧಿಸಿದ್ದು ಅಂತಿಮವಾಗಿ 6-3 ರಿಂದ ಜಯ ಸಾಧಿಸಿ ಸಮಬಲದ ಹೋರಾಟ ನೀಡಿದರು. 3ನೆ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಗಫಿನ್ ಸ್ವಿಸ್‌ನ ಫೆಡರರ್‌ಗೆ ಒತ್ತಡ ಹೇರಿದರು. 3ನೆ ಸೆಟ್‌ನ್ನು 6-4 ರಿಂದ ಜಯಿಸಿ ಫೈನಲ್‌ಗೆ ತಲುಪಿದರು. ಈ ಬಾರಿಯ ಎಟಿಪಿ ಫೈನಲ್ಸ್‌ನಲ್ಲಿ ಗಫಿನ್, ಗ್ರಿಗೊರ್ ಡಿಮಿಟ್ರೊವ್ ಹಾಗೂ ಜಾಕ್ ಸಾಕ್ ಮೊದಲ ಬಾರಿ ಸೆಮಿಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News