ಬೆಂಗಳೂರಿನಲ್ಲಿ ದಫ್ ಪ್ರದರ್ಶನ, ಬ್ಯಾರಿ ಹಾಡು

Update: 2017-11-19 04:55 GMT

ಬೆಂಗಳೂರು, ನ.19: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ‘ಮಕ್ಕಳ ಹಬ್ಬ-2017’ ಕಾರ್ಯಕ್ರಮದಲ್ಲಿ ಬ್ಯಾರಿ ಹಾಡು, ದಫ್ ಪ್ರದರ್ಶನ ವಿಶೇಷ ಗಮನ ಸೆಳೆಯಿತು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಾಯೋಜಕತ್ವದಲ್ಲಿ ಮಣಿಪುರ-ಕಟಪಾಡಿಯ ಖಲಂದರ್ ಷಾ ದಫ್ ಕಮಿಟಿ ತಂಡದಿಂದ ಶಾಂತಿ-ಸೌಹಾರ್ದವನ್ನು ಬಿಂಬಿಸುವ ದಫ್‌ಪ್ರದರ್ಶನ, ಇಬ್ಬ ಕಡಂಬು ತಂಡದಿಂದ ಬ್ಯಾರಿ ಹಾಡುಗಾರಿಕೆ ನಡೆಯಿತು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ, ಕರ್ನಾಟಕ ದಫ್ ಅಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಕಲಾ ತಂಡಗಳ ನೇತೃತ್ವ ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News