21ರಂದು ಕಾಸರಗೋಡಿನಲ್ಲಿ ಕನ್ನಡ ಚಿಂತನೆ ಕಾರ್ಯಕ್ರಮ

Update: 2017-11-19 07:01 GMT

ಕಾಸರಗೋಡು, ನ.19: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಅಪೂರ್ವ ಕಲಾವಿದರು ಕಾಸರಗೋಡು ಇದರ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಯುತ್ತಿರುವ ಕನ್ನಡ ಚಿಂತನೆ ಕಾರ್ಯಕ್ರಮದ ಹಿನ್ನಲೆಯಂಗವಾಗಿ ವಿಶೇಷ ಕಾರ್ಯಾಗಾರವೊಂದನ್ನು ಹಮ್ಮಿಕೊಳ್ಳಲಾಗಿದೆ.

 ಕಾಸರಗೋಡಿನ ಮಲಯಾಳ ಪತ್ರಕರ್ತರಿಗೆ ಕನ್ನಡ ಕಲಿಸುವ ವಿಶೇಷ ಯೋಜನೆಯೊಂದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದು, ಇದಕ್ಕೆ ಅಪೂರ್ವ ಕಲಾವಿದರು ಹಾಗೂ ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸಹಕಾರ ನೀಡಲಿದೆ. 

  ನವೆಂಬರ್ 21ರಂದು  ಪೂರ್ವಾಹ್ನ 11 ಗಂಟೆಗೆ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕನ್ನಡ ಕಲಿಕಾ ಕಾರ್ಯಾಗಾರದ ಉದ್ಘಾಟನೆ ಮತ್ತು ವಿಶೇಷೋಪನ್ಯಾಸ ನಡೆಯಲಿದೆ. ಕಾರ್ಯಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ.ಸಿದ್ಧರಾಮಯ್ಯ ಉದ್ಘಾಟಿಸುವರು.

ಕಾಸರಗೋಡು ಪ್ರೆಸ್ ಕ್ಲಬ್ ನ ಅಧ್ಯಕ್ಷ ಟಿ.ಎ.ಶಾಫಿ ಅಧ್ಯಕ್ಷತೆ ಕಾರ್ಯಕ್ರಮದ ವಹಿಸುವರು. ಜಿಲ್ಲಾಧಿಕಾರಿ ಕೆ. ಜೀವನ್ ಬಾಬು  ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ವಿನೋದ್ ಪಾಯಂ, ಅಪೂರ್ವ ಕಲಾವಿದರು ಇದರ ಅಧ್ಯಕ್ಷ ಉಮೇಶ್ ಸಾಲಿಯಾನ್ ಎಂ., ಕಾರ್ಯದರ್ಶಿ ಡಾ. ರತ್ನಾಕರ ಮಲ್ಲಮೂಲೆ, ಕನ್ನಡ ಚಿಂತನೆ ಕಾರ್ಯಕ್ರಮ ಸಂಯೋಜಕ ಎಸ್.ಜಗನ್ನಾಥ ಶೆಟ್ಟಿ ಉಪಸ್ಥಿತರಿರುವರು.
ಸಾಂಸ್ಕತಿಕ  ಕಾರ್ಯಕ್ರಮದ ಅಂಗವಾಗಿ  ಕಾಸರಗೋಡಿನ  ಶ್ರೀರಾಗ್  ಮತ್ತು ತಂಡದವರಿಂದ ಜನಪದ ಗೀತೆಗಾಯನವೂ ನಡೆಯಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News