‘ಪ್ರೆಸ್ಟೀಜ್ ಎಂಥೂಸಿಯಾ -2017’ಕ್ಕೆ ಚಾಲನೆ

Update: 2017-11-19 09:03 GMT

ಮಂಗಳೂರು, ನ.19: ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ವೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಪ್ರಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರ ಬಡ ಮಕ್ಕಳ ಸೇವಾ ಚಟುವಟಿಕೆಗಳ ಸಹಾಯಾರ್ಥ ಹಮ್ಮಿಕೊಂಡ ‘ಎಂಥೂಸಿಯಾ -2017’ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕವಾಗಿ ಮುಂದುವರಿದಿದ್ದು, ಶೈಕ್ಷಣಿಕ ಮಟ್ಟವು ಗುಣಮಟ್ಟದಿಂದ ಕೂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಅದನ್ನು ಮುನ್ನಡೆಸುತ್ತಿರುವವರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಇಂತಹ ಶಾಲೆಗಳ ಪೈಕಿ ಹೈದರಲಿ ನೇತೃತ್ವದ ಪ್ರೆಸ್ಟೀಜ್ ಸಂಸ್ಥೆಯೂ ಒಂದು ಎಂದು ರಮಾನಾಥ ರೈ ಶ್ಲಾಘನೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹೈದರಲಿ ಮಾತನಾಡಿ, ಸಂಸ್ಥೆಯ ವತಿಯಿಂದ ಮಕ್ಕಳ ಪ್ರತಿಭಾ ಪ್ರದರ್ಶನ ಹಾಗೂ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆ ಸಮಾಜದ ದುರ್ಬಲ ಅಶಕ್ತ, ಬಡ ಮಕ್ಕಳಿಗೆ ಈ ಕಾರ್ಯಕ್ರಮದ ಮೂಲಕ ಸಹಾಯ ಮಾಡುವ ಸೇವಾ ಯೋಜನೆ ಹೊಂದಿರುವುದಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಮಾತನಾಡಿ, ಸ್ಮಾರ್ಟ್ ಸಿಟಿಗೆ ಆಯ್ಕೆಯಾದ ಮಂಗಳೂರು ಮಹಾನಗರವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯ ಬೇಕಾದರೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳ ಅಗತ್ಯವಿದೆ ಈ ನಿಟ್ಟಿನಲ್ಲಿ ಪ್ರೆಸ್ಟೀಜ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಸಮಾಂಭದಲ್ಲಿ ಮನಪಾ ಸದಸ್ಯ ಜಿ. ಸುರೇಂದ್ರ, ಫೆಮಿನಾ ಮಿಸ್ ಇಂಡಿಯಾ 2015ರ ದ್ವೀತೀಯ ಪ್ರಶಸ್ತಿ ಪಡೆದ ಅಫ್ರಿನಾ ವಾಝ್, ಪ್ರೆಸ್ಟೀಜ್ ಶೈಕ್ಷಣಿಕ ಸಂಸ್ಥೆಯ ಆಡಳಿತ ನಿರ್ದೇಶಕಿ ರೇಶ್ಮಾ ಹೈದರ್, ಪ್ರಾಂಶುಪಾಲೆ ಫಿರೋಝಾ ಫೈಝಲ್, ಟ್ರಸ್ಟಿಗಳಾದ ಸಯೀದ್ ಫೈಝಲ್ ಹಾಗೂ ಸಂಸ್ಥೆಯ ಪ್ರತಿನಿಧಿಗಳಾದ ಹಝೀಬ್ ಅಮನ್, ರಾಹೆಲ್ ಹೈದರ್, ಹೀನಾ ಆಯೆಶಾ, ಪಿಯು ವಿಭಾಗದ ಡೀನ್ ಶೋಭಾ ಟಿ.ಕೆ., ಕಾರ್ಯಕ್ರಮದ ಸಂಚಾಲಕಿ ಶಬೀನಾ ಸಯೀದ್, ತುಳಸಿ ಸಿ.ಬಿ., ಶರ್ಮಿಳಾ ಕುಮಾರಿ ಮೊದಲಾದವರು ಉಪಸ್ಥಿತದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News