ರಣಜಿ: ಉತ್ತರಪ್ರದೇಶ 243/5

Update: 2017-11-19 18:19 GMT

ಕಾನ್ಪುರ, ನ.19: ಉಮಂಗ್ ಶರ್ಮ, ಶಿವಂ ಚೌಧರಿ ಹಾಗೂ ರಿಂಕು ಸಿಂಗ್ ಅರ್ಧಶತಕದ ಕೊಡುಗೆ ನೆರವಿನಿಂದ ಉತ್ತರಪ್ರದೇಶ ತಂಡ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 243 ರನ್ ಗಳಿಸಿದೆ.

ಮೂರನೆ ದಿನವಾದ ರವಿವಾರ ಕರ್ನಾಟಕದ ಮೊದಲ ಇನಿಂಗ್ಸ್ ಮೊತ್ತ 655 ರನ್‌ಗೆ ಉತ್ತರಿಸಹೊರಟಿರುವ ಆತಿಥೇಯ ಉತ್ತರಪ್ರದೇಶ ತಂಡಕ್ಕೆ ಉಮಂಗ್(89 ರನ್, 158 ಎಸೆತ, 13 ಬೌಂಡರಿ) ಹಾಗೂ ಶಿವಂ(57,87 ಎಸೆತ, 6 ಬೌಂಡರಿ, 3 ಸಿಕ್ಸರ್)ಮೊದಲ ವಿಕೆಟ್‌ಗೆ 106 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ ಈ ಜೋಡಿಯನ್ನು ಗೌತಮ್ ಬೇರ್ಪಡಿಸಲು ಯಶಸ್ವಿಯಾದರು.

ರಿಂಕು ಸಿಂಗ್(ಅಜೇಯ 57, 50 ಎ, 7 ಬೌಂಡರಿ, 1 ಸಿಕ್ಸರ್) ಹಾಗೂ ಉಪೇಂದ್ರ ಯಾದವ್(ಅಜೇಯ 9) ಕ್ರೀಸ್ ಕಾಯ್ದುಕೊಂಡಿದ್ದಾರೆ. ಕರ್ನಾಟಕದ ಪರ ರೋನಿತ್ ಮೋರೆ 2 ವಿಕೆಟ್ ಪಡೆದರು. ಇದಕ್ಕೆ ಮೊದಲು 7 ವಿಕೆಟ್‌ಗಳ ನಷ್ಟಕ್ಕೆ 642 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ಬೇಗನೆ 3ವಿಕೆಟ್‌ಗಳನ್ನು ಕಳೆದುಕೊಂಡು 655 ರನ್‌ಗೆ ಆಲೌಟಾಯಿತು. 110 ರನ್‌ಗೆ 6 ವಿಕೆಟ್‌ಗಳನ್ನು ಉಡಾಯಿಸಿದ ಇಮ್ತಿಯಾಝ್ ಅಹ್ಮದ್ ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಮೊದಲ ಇನಿಂಗ್ಸ್: 186.1 ಓವರ್‌ಗಳಲ್ಲಿ 655

( ಮನೀಷ್ ಪಾಂಡೆ 238, ಡಿ. ನಿಶ್ಚಲ್195,ಮಾಯಾಂಕ್ ಅಗರವಾಲ್ 90,ಕರುಣ್ ನಾಯರ್ 62,ಡಿ.ಪ್ರತಾಪ್ ಸಿಂಗ್ 3-108, ಇಮ್ತಿಯಾಝ್ ಅಹ್ಮದ್ 6-110)

ಉತ್ತರಪ್ರದೇಶ ಮೊದಲ ಇನಿಂಗ್ಸ್: 69 ಓವರ್‌ಗಳಲ್ಲಿ 243/5

(ಉಮಂಗ್ ಶರ್ಮ ಅಜೇಯ 89, ಶಿವಂ ಚೌಧರಿ 57,ರಿಂಕು ಸಿಂಗ್ ಅಜೇಯ 57, ಮುಹಮ್ಮದ್ ಸೈಫ್26, ರೋನಿತ್ ಮೋರೆ 2-54)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News