ಇನ್ನೂ ಕುರ್ಚಿಗೆ ಅಂಟಿಕೊಂಡಿರುವ ಮುಗಾಬೆ

Update: 2017-11-20 16:33 GMT

ಹರಾರೆ (ಜಿಂಬಾಬ್ವೆ), ನ. 20: “ಅಧಿಕಾರದಿಂದ ಕೆಳಗಿಳಿಯಿರಿ, ಇಲ್ಲವೇ ವಾಗ್ದಂಡನೆ ಎದುರಿಸಿ” ಎಂಬ ಆಡಳಿತಾರೂಢ ಪಕ್ಷದ ಎಚ್ಚರಿಕೆಯನ್ನು ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಧಿಕ್ಕರಿಸಿದ್ದಾರೆ.

ಜನರನ್ನು ಉದ್ದೇಶಿಸಿ ಅವರು ಟಿವಿಯಲ್ಲಿ ಭಾಷಣ ಮಾಡಿದರಾದರೂ, ರಾಜೀನಾಮೆ ನೀಡುವ ಬಗ್ಗೆ ಏನನ್ನೂ ಹೇಳಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಜನರು, ಅವರ ವಿರುದ್ಧ ಹೊಸದಾಗಿ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.

37 ವರ್ಷಗಳ ಕಾಲ ನಿರಂತರವಾಗಿ ಆಡಳಿತ ನಡೆಸಿದ ಜಗತ್ತಿನ ಅತ್ಯಂತ ಹಿರಿಯ ಸರಕಾರಿ ಮುಖ್ಯಸ್ಥ 93 ವರ್ಷದ ಮುಗಾಬೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲು ಪ್ರತಿಪಕ್ಷ ಕಾರ್ಯಕರ್ತರು ಮುಂದಾಗಿದ್ದಾರೆ.

‘‘ನಿಮ್ಮ ಕಾಲ ಮುಗಿಯಿತು. ನೀವು ಘನತೆ ಮತ್ತು ಸೌಜನ್ಯಯುತವಾಗಿ ಅಧಿಕಾರದಿಂದ ಕೆಳಗಿಳಿಯಬೇಕು’’ ಎಂಬುದಾಗಿ ಸ್ವಾತಂತ್ರ್ಯ ಸಂಗ್ರಾಮ ಸೈನಿಕರ ಸಂಘದ ಮುಖ್ಯಸ್ಥ ಕ್ರಿಸ್ ಮುಟ್ಸ್‌ವಂಗ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News